National

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಬಸ್‌; ಶಿಮ್ಲಾದಲ್ಲಿ ಹೆಚ್ಚಾದ ಅಪಘಾತಗಳು

ಶಿಮ್ಲಾ: ಶಿಮ್ಲಾದಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿದೆ. ಇಂದೂ ಕೂಡಾ ಖಾಸಗಿ ಬಸ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಸೋಲನ್‌ನಿಂದ ಸಾಧುಪುಲ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಆರು ಮಂದಿಗೆ ತೀವ್ರ ಗಾಯಗಳಾಗಿವೆ.

ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ ಒಟ್ಟು ಏಳು ಮಂದಿ ಇದ್ದರು. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಬಸ್ ಸ್ಫೋಟಗೊಂಡಿದೆ. ಚಾಲಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಎಕೆ ಟ್ರಾವೆಲ್ ಖಾಸಗಿ ಬಸ್ ಸಾಧುಪುಲ್‌ನತ್ತ ತೆರಳುತ್ತಿದ್ದಾರೆ ಬೆಳಗ್ಗೆ 10 ಗಂಟೆಗೆ ಅಪಘಾತಕ್ಕೀಡಾಗಿದೆ. ಗಾಯಗೊಂಡವರನ್ನು ಸೋಲನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಎಸ್ಪಿ ವೀರೇಂದ್ರ ಶರ್ಮಾ ಅವರು ಅಪಘಾತವನ್ನು ಖಚಿತಪಡಿಸಿದ್ದಾರೆ.

Share Post