National

ಎಲೆಕ್ಟ್ರಿಕ್‌ ಬೈಕ್‌ ಸ್ಫೋಟ; ವೆಲ್ಲೂರಿನಲ್ಲಿ ತಂದೆ-ಮಗಳ ಸಾವು

ಚೆನ್ನೈ; ಇತ್ತೀಚೆಗೆ ಬೆಂಗಳೂರಿನಲ್ಲಿ ರಸ್ತೆಬದಿ ಇದ್ದ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ, ಮಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೇ ರೀತಿಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಒಂದು ಬೆಂಕಿ ದುರಂತ ನಡೆದಿದ್ದು ತಂದೆ, ಮಗಳ ಸಾವನ್ನಪ್ಪಿದ್ದಾರೆ. 

ವೆಲ್ಲೂರಿನ ದುರೈ ಅವರು ಇತ್ತೀಚೆಗಷ್ಟೇ ಎಲೆಕ್ಟ್ರಿಕ್‌ ಬೈಕ್‌ ಒಂದನ್ನು ಖರೀಸಿದ್ದರು. ರಾತ್ರಿ ಬೈಕ್‌ನ್ನು ಮನೆಯಲ್ಲಿ ನಿಲ್ಲಿಸಿ, ಚಾರ್ಜ್‌ಗೆ ಹಾಕಿದ್ದರು. ಈ ವೇಳೆ ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಅದು ಸುಟ್ಟು ಭಸ್ಮವಾಗಿದೆ. ಬೆಂಕಿಯ ಕಾರಣದಿಂದ ಮನೆಯೆಲ್ಲಾ ಹೊಗೆ ಆವರಿಸಿದೆ. ಇದರಿಂದಾಗಿ ಮನೆಯಲ್ಲಿ ಮಲಗಿದ್ದ ದುರೈ ಹಾಗೂ ಅವರ ಮಗಳ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

 

Share Post