National

ಗುರುದ್ವಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಇಂದು ಮುಂಜಾನೆ ಗುರುದ್ವಾರ ತಾಕತ್ ಶ್ರೀ ಪಾಟ್ನಾ ಸಾಹಿಬ್ ಜಿಗೆ ಭೇಟಿ ನೀಡಿದ್ದರು.. ಶ್ರೀ ಗುರು ಗೋಬಿಂದ್ ಸಿಂಗ್ ಜಿಯವರ ಜನ್ಮಸ್ಥಳವಾದ ದರ್ಬಾರ್ ಸಾಹಿಬ್‌ನಲ್ಲಿ ಪ್ರಧಾನಮಂತ್ರಿಯವರು ನಮನ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅರ್ದಾಸ್‌ ನಲ್ಲಿ ಭಾಗಿಯಾದರು ಮತ್ತು ಅಲ್ಲಿ ಲೈವ್ ಕೀರ್ತನ್ ಅನ್ನು ಆಲಿಸಿದರು. ಪ್ರಧಾನಮಂತ್ರಿ ಶ್ರೀ ಗುರು ಗೋವಿಂದ್ ಸಿಂಗ್ ಅವರು ಬಳಸುತ್ತಿದ್ದ ಅಪರೂಪದ `ಶಸ್ತ್ರ’ಗಳ (ಆಯುಧಗಳ) ದರ್ಶನವನ್ನೂ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಚೌರ್ ಸಾಹಿಬ್ ಅವರ ಸೇವೆ ಮಾಡಿದರು ಮತ್ತು ಪಾಥ್‌ನಲ್ಲಿ “ಸರ್ಬತ್ ದ ಭಲಾ” ಗಾಗಿ ಕುಳಿತರು.  ಪ್ರಧಾನ ಮಂತ್ರಿಗಳು ಅಲ್ಲಿಯ ಲಂಗರ್ ಅಡುಗೆಮನೆಗೆ (ಸಮುದಾಯ ಅಡಿಗೆ) ಭೇಟಿ ನೀಡಿದರು, ದಾಲ್ ತಯಾರಿಸಿದರು, ಗುರುದ್ವಾರದಲ್ಲಿರುವ ಸಂಗತ್‌ಗೆ ಆಹಾರವನ್ನು ಬಡಿಸಿದರು.

ಪ್ರಧಾನಮಂತ್ರಿಯವರು “ಕರಃ ಪ್ರಸಾದ” ತೆಗೆದುಕೊಂಡರು, ಅದಕ್ಕಾಗಿ ಅವರು ಡಿಜಿಟಲ್ ಪಾವತಿ ವಿಧಾನದ ಮೂಲಕ ಪಾವತಿಸಿದರು. ಪ್ರಧಾನ ಮಂತ್ರಿಗೆ ಗುರುದ್ವಾರ ಸಮಿತಿಯಿಂದ “ಸನ್ಮಾನ್ ಪತ್ರ” ಮತ್ತು ಸಿಖ್ ಬೀಬಿಸ್ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದರು.

Share Post