ಪ್ರಿಯಕರನ ಜೊತೆ ಓಡಿಹೋದ ಮದುಮಗಳು..!; ನಿಂತುಹೋದ ಮದುವೆ!
ಲಖನೌ; ಮನೆಯವರು ನೋಡಿದ ವರನೊಂದಿಗೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಯುತ್ತಿರುವಾಗಲೇ ಮದು ಮಗಳು ತನ್ನ ಪ್ರಿಯಕರನೊಂದಿಗೆ ಓಡಿಹೋಗಿರುವ ಘಟನೆ ನಡೆದಿದೆ.. ಉತ್ತರ ಪ್ರದೇಶದ ಬಾಂದಾದಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ಪೋಷಕರು ಈಗ ಮಗಳನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ..
ಜುಲೈ 13ಕ್ಕೆ 22 ವರ್ಷದ ಮದುವೆ ಫಿಕ್ಸ್ ಆಗಿತ್ತು.. ಬಹುತೇಕ ಎಲ್ಲಾ ಬಂದು ಬಳಗದವರಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು.. ಹುಡುಗಿಯ ಪೋಷಕರು ಅದ್ದೂರಿಯಾಗಿ ಮದುವೆ ನಡೆಸಲು ಸಿದ್ಧತೆ ನಡೆಸಿದ್ದರು.. ಈ ನಡುವೆಯೇ ಹುಡುಗಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ.. ತಾನು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಓಡಿಹೋಗಿದ್ದು, ಅವರನ್ನು ಹುಡುಕಿಕೊಡುವಂತೆ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ..
ಮದುವೆಗೂ ಮುನ್ನ ಹಲವು ಶುಭಕಾರ್ಯಗಳು ನಡೆಯುತ್ತವೆ.. ಅದಕ್ಕೆ ಮನೆಯವರೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.. ಜೊತೆಗೆ ಶಾಪಿಂಗ್ ಕೂಡಾ ಶುರು ಮಾಡಿದ್ದರು.. ಈ ಕಾರಣದಿಂದಾಗಿ ಮನೆಯವರೆಲ್ಲಾ ದಿನಸಿ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗಿದ್ದರು.. ಈ ವೇಳೆ ವಧು ಒಬ್ಬಳೇ ಮನೆಯಲ್ಲಿದ್ದಳು.. ಇದೇ ಸುಸಂದರ್ಭ ಎಂದು ತಿಳಿದ ಹುಡುಗಿ ತನ್ನ ಪ್ರಿಯತಮನನ್ನು ಕರೆಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.. ಶಾಪಿಂಗ್ ಮುಗಿಸಿ ಬಂದ ಪೋಷಕರಿಗೆ ಮಗಳು ಓಡಿಹೋಗಿರುವುದು ಗೊತ್ತಾಗಿದೆ.. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ..