ಮೊರ್ಬಿ ತೂಗು ಸೇತುವೆ ಕುಸಿದು ದುರಂತ; 60 ಮಂದಿ ದಾರುಣ ಸಾವು
ಮೊರ್ಬಿ; ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನೂರು ವರ್ಷಕ್ಕೂ ಹಳೆಯದಾದ ತೂಗು ಸೇತುವೆ ಮುರಿದುಬಿದ್ದಿದ್ದು, ದುರಂತದಲ್ಲಿ 50 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ ೬.೩೦ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
230 ಮೀಟರ್ ಉದ್ದದ ಈ ಸೇತುವೆಯನ್ನು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಅದು ಏಕಾಏಕಿ ಸಂಪೂರ್ಣ ಕುಸಿದುಬಿದ್ದಿದೆ. ಇತ್ತೀಚೆಗೆ ಅದನ್ನು ನವೀಕರಣ ಮಾಡುವುದಕ್ಕಾಗಿ ಆರು ತಿಂಗಳಿಂದ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ಆದ್ರೆ ನಾಲ್ಕು ದಿನದ ಹಿಂದೆಯಷ್ಟೇ ಓಡಾಟ ಅವಕಾಶ ನೀಡಲಾಗಿತ್ತು. ನವೀಕರಣಗೊಂಡು ಸಾರ್ವಜನಿಕರಿಗೆ ಮುಕ್ತವಾದ ನಾಲ್ಕೇ ದಿನದಲ್ಲಿ ಸೇತುವೆ ಕುಸಿದುಬಿದ್ದಿದೆ. ‘ಭಾನುವಾರ ರಜೆ ಇದ್ದ ಕಾರಣ ನೂರಾರು ಜನರು ಸೇತುವೆ ಮೇಲೆ ಸೇರಿದ್ದರು. ಹೀಗಾಗಿ ಅದು ಭಾರ ತಡೆಯಲು ಆಗದೇ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಜ್‌ಕೋಟ್ ಹಾಗೂ ಕಚ್‌ನಿಂದ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಘಟನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ೨ ಲಕ್ಷ ರೂ ಹಾಗೂ ರಾಜ್ಯ ಸರ್ಕಾರದಿಂದ ನಾಲ್ಕು ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ತಲಾ ೫೦ ಸಾವಿರ ರೂಪಾಯಿ ನೀಡಲಾಗುತ್ತದೆ.