ಅಪರಿಚಿತರಿಂದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ
ಉತ್ತರಪ್ರದೇಶ: ಮೀರತ್ನಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ವಾಪಸಾಗುವ ವೇಳೆ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥರಾದ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಮೀರತ್ನ ಕಿಥೌರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅಸಾದುದ್ದೀನ್ ಓವೈಸಿ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದಾಗ ಛಜರ್ಸಿ ಟೋಲ್ ಪ್ಲಾಜಾ ಬಳಿ ಅಸಾದ್ ಅವರ ವಾಹನದ ಮೇಲೆ ಆಗಂತುಕರು 3-4 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಿಂದ ಓವೈಸಿ ಕಾರಿನ ಟೈರ್ ಪಂಕ್ಚರ್ ಆಗಿದ್ದರಿಂದ ಅಸಾದುದ್ದೀನ್ ಓವೈಸಿ ಮತ್ತೊಂದು ವಾಹನದಲ್ಲಿ ದೆಹಲಿಗೆ ತೆರಳಿದ್ರು. ಈ ಬಗ್ಗೆ ಮಾಹಿತಿ ನೀಡಿರುವ ಒವೈಸಿ ಅವರು ಮೂವರು ಆಗಂತುಕರು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು, ಅವರಲ್ಲಿ ಇಬ್ಬರು ಗುಂಡು ಹಾರಿಸಿದರು ಎಂದಿದ್ದಾರೆ. ಗುಂಡಿನ ದಾಳಿಯಿಂದಾಗಿ ಕಾರು ತೂತು ಬಿದ್ದಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
AIMIM chief Asaduddin Owaisi says that 3-4 rounds of bullets were fired upon his vehicle near Chhajarsi toll plaza while he was heading to Delhi after an election-related event in Kithaur, Meerut (in Uttar Pradesh).
Visual from the spot. pic.twitter.com/WXSQS88bMA
— ANI (@ANI) February 3, 2022
ಇದಕ್ಕೂ ಮುನ್ನ ಮೀರತ್ ಸಿಟಿ ವಿಧಾನಸಭಾ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಮನೆಮನೆ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಸ್ಪಿ ಮತ್ತು ಬಿಎಸ್ಪಿ ಬಿಜೆಪಿಗಿಂತ ಕಡಿಮೆ ಇಲ್ಲ ಎಂದು ಓವೈಸಿ ಹೇಳಿದ್ದಾರೆ. ಈ ಪಕ್ಷಗಳಿಗಾಗಿ ಮುಸ್ಲಿಮರು ಎಷ್ಟು ದಿನ ತ್ಯಾಗ ಮಾಡಬೇಕು ಎಂದು ಪ್ರಶ್ನಿಸಿದ್ರು.