National

ಜಿಲ್ಲಾ ಕೋರ್ಟ್‌ ಆವರಣದಲ್ಲಿ ಸ್ಫೋಟ, ಇಬ್ಬರು ಸಾವು

ಲೂಧಿಯಾನ: ಪಂಜಾಬ್‌ ನ ಲೂಧಿಯನದ ಜಿಲ್ಲಾ ಕೋರ್ಟ್‌ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿಗೆ ಗಾಯವಾಗಿರುವುದು ವರದಿಯಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಕೂಡಲೇ ರಕ್ಷಣಾ ಪಡೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ.

ಕೋರ್ಟ್‌ ನ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಹಿನ್ನೆಲೆಯಲ್ಲಿ ನೂರಾರು ಮಂದಿ ಕೋರ್ಟ್‌ ಆವರಣದಲ್ಲಿ ಮುಂದೆ ಜಮಾಯಿಸಿದ್ದಾರೆ. ನ್ಯಾಯಾಲಯದ ಮೂರನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಬಾಂಬ್ ಸ್ಪೋಟದ​ ತೀವ್ರತೆ ಹೆಚ್ಚಿದ್ದು, ಇದರಿಂದ ವಾಶ್​ರೂ ಗೋಡೆಗಳು ಚಿದ್ರವಾಗಿದ್ದು, ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ ಎಂದು ತಿಳಿದು ಬಂದಿದೆ.ಇತ್ತೀಚೆಗೆ ದೆಹಲಿಯ ರೋಹಿಣಿ ಕೋರ್ಟ್‌ ನಲ್ಲೂ ಬಾಂಬ್‌ ಸ್ಫೋಟವಾಗಿತ್ತು. ಈ ಹಿನ್ನೆಲೆಯಲ್ಲಿ ವಸ್ತುಗಳು ಹಾನಿಯಾಗಿತ್ತು.

 

Share Post