Sports

ನೆಟ್‌ ಬೌಲರ್‌ಗೂ ಪರದಾಡುತ್ತಿರುವ ಅಜಿಂಕ್ಯಾ ರಹಾನೆ

ಸೆಂಚೂರಿಯನ್‌ : ದ.ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಮೊದಲ ಪಂದ್ಯ ಇದೇ ಡಿಸೆಂಬರ್‌ ೨೬ರಂದು ಶುರು ಆಗಲಿದೆ. ಬಾಕ್ಸಿಂಗ್‌ ಡೇ ದಿನದಂದು ಶುರು ಆಗಲಿರುವ ಈ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಆಡ್ತಾರೋ ಇಲ್ಲವೋ ಎಂಬ ಗೊಂದಲ ಸೃಷ್ಠಿಯಾಗಿದೆ.

ಟೆಸ್ಟ್‌ ಸ್ಪೆಷಲಿಸ್ಟ್‌ ಎನಿಸಿಕೊಂಡಿರುವ ಅಜಿಂಕ್ಯಾ ರಹಾನೆ ಅವರು ಫಾರ್ಮ್‌ ಕಂಡುಕೊಳ್ಳಲು ಆಗುತ್ತಿಲ್ಲ. ಕಳೆದ ಸೀರೀಸ್‌ ಅಲ್ಲಿಯೂ ಕೂಡ ರಹಾನೆ ಅವರು ಕಳಪೆ ಪ್ರದರ್ಶನ ನೀಡಿದ್ದರು. ಈಗ ಭಾರತ ತಂಡದಲ್ಲಿ ೫ನೇ ಕ್ರಮಾಂಕದ ಬ್ಯಾಟ್ಸ್‌ಮೆನ್‌ ಯಾರೆಂಬ ತಲೆನೋವು ಎದುರಾಗಿದೆ.

ದ.ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಫಾಸ್ಟ್‌ ಬೌಲರ್‌ಗಳು ಇದ್ದರೆ ಉತ್ತಮ ಎಂದು ತಂಡ ಆಲೋಚಿಸುತ್ತಿದೆ. ಈ ಮಧ್ಯೆ ಅಜಿಂಕ್ಯಾ ಅವಡು ನೆಟ್ಸ್‌ನಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದಾರೆ. ಸ್ಟಾಂಡ್‌ ಬೈ ಬೌಲರ್‌ ಆಗಿರುವ ದೀಪಕ್‌ ಚಹಾರ್‌ ಅವರ ದಾಳಿಗೆ ರಹಾನೆ ತಬ್ಬಿಬ್ಬಾಗಿದ್ದಾರೆ. ದೀಪಕ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ.

ಮೊದಲ ಟೆಸ್ಟ್‌ನಲ್ಲಿ ರಹಾನೆ ಬದಲು ಶಾರ್ದೂಲ್‌ ಠಾಕೂರ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

Share Post