NationalScienceTechTechnology

ಇಂದು ನಭಕ್ಕೆ ಹಾರಲಿದೆ ಚಂದ್ರಯಾನ-3; ಮ.2.35ಕ್ಕೆ ಉಡಾವಣೆ

ಬೆಂಗಳೂರು; ಚಂದ್ರಯಾನ-3 ಉಡಾವಣೆಗೆ ಕೊನೇ ಹಂತದ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ನಭಕ್ಕೆ ಹಾರಲು ಎಮ್‌ವಿಎಂ-3 ರಾಕೆಟ್‌ ರೆಡಿಯಾಗಿ ನಿಂತಿದೆ. ಮುಹೂರ್ತದಂತೆ ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆ ನಡೆಯಲಿದೆ. ಇದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ.

ಇಂದು ಲ್ಯಾಂಡರ್‌ ಚಂದ್ರನ ಕಕ್ಷೆ ಸೇರಲಿದ್ದು, ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಹೊತ್ತು ಎಲ್‌ವಿಎಂ-3 ರಾಕೆಟ್‌ ಮೇಲಕ್ಕೆ ಚಿಮ್ಮಲಿದೆ.  ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ ನಿಂದ ಉಡಾವಣೆ ಮಾಡಲಾಗುತ್ತದೆ.  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಈ ಚಂದ್ರಯಾನ ಶುರುವಾಗಲಿದೆ.

 

Share Post