National

Bharath Rathna; ಪಿ.ವಿ.ನರಸಿಂಹರಾವ್‌, ಚರಣ್‌ಸಿಂಗ್‌, ಸ್ವಾಮಿನಾಥನ್‌ಗೆ ಭಾರತರತ್ನ

ನವದೆಹಲಿ; ಮೊನ್ನೆಯಷ್ಟೇ ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿಯವರಿಗೆ (LK advani), ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್‌ ಭಾರತ ರತ್ನ ಘೋಷಿಸಲಾಗಿತ್ತು. ಇದೀಗ ಇಬ್ಬರು ಮಾಜಿ ಪ್ರಧಾನಿಗಳು ಹಾಗೂ ಹಸಿರು ಕ್ರಾಂತಿಯ ಪಿತಾಮಹನಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ.

ಮೂವರಿಗೆ ಭಾರತರತ್ನ ಘೋಷಣೆ

ಭಾರತದ ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್  (pv narasimharao, choudhari charan sing, ms swaminathan) ಅವರಿಗೆ ಭಾರತ ರತ್ನ Bhararth rathna) ಘೋಷಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌

ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್‌;   1991ರಿಂದ 1996ರವರೆಗೆ ಪಿ.ವಿ.ನರಸಿಂಹರಾವ್‌ ಅವರು ಭಾರತದ ಪ್ರಧಾನಿಯಾಗಿದ್ದರು. ಪಿ.ವಿ.ನರಸಿಂಹರಾವ್‌ ಅವರು ಆಂಧ್ರಪ್ರದೇಶದವರಾಗಿದ್ದು, ಅವರ ಪೂರ್ತಿ ಹೆಸರು ಪಾಮುಲಪರ್ತಿ ವೆಂಕಟ ನರಸಿಂಹ ರಾವ್. ದಕ್ಷಿಣ ಭಾರತದಿಂದ ಪ್ರಧಾನಿಯಾದ ಪಿ.ವಿ.ನರಸಿಂಹರಾವ್‌ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಇವರ ಅಧಿಕಾರಾವಧಿಯಲ್ಲಿ ಉದಾರೀಕರಣ ಮತ್ತು ಜಾಗತೀಕರಣ ಹೆಚ್ಚು ಒತ್ತು ನೀಡಿದ್ದರು. ಅನೇಕ ಆರ್ಥಿಕ ಸುಧಾರಣೆಗಳನ್ನು ತಂದ ಕೀರ್ತಿ ಪಿ.ವಿ.ನರಸಿಂಹರಾವ್‌ ಅವರಿಗೆ ಸಲ್ಲುತ್ತದೆ.

ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಪಿ.ವಿ.ನರಸಿಂಹರಾವ್‌ ಅವರು, ರಾಜೀವ್‌ ಗಾಂಧಿ ಹತ್ಯೆ ನಂತರ ಪ್ರಧಾನಿ ಪಟ್ಟವನ್ನು ಏರಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಪಿ.ವಿ.ನರಸಿಂಹ ರಾವ್‌ ಅವರು ಡಿಸೆಂಬರ್ 23, 2004 ರಂದು ನಿಧನರಾದರು. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್

ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌; ಚೌಧರಿ ಚರಣ್‌ ಸಿಂಗ್‌ ಅವರು ದೇಶದ ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.   1979ರ ಜುಲೈ 28 ರಂದು  ಪ್ರಧಾನಿ ಹುದ್ದೆ ಅಲಂಕರಿಸಿದ ಚೌಧರಿ ಚರಣ್‌ ಸಿಂಗ್‌ ಅವರು, 1980ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು.

ಇಂದಿರಾಗಾಂಧಿ ಹಾಗೂ ಸಂಜಯ್ ಗಾಂಧಿಯವರು ಚೌಧರಿ ಚರಣ್ ಸಿಂಗ್ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆದ್ರೆ ಷರತ್ತು ಒಂದನ್ನು ವಿಧಿಸಿದ್ದರು. ತಮ್ಮ ವಿರುದ್ಧ ಕೇಸ್‌ಗಳನ್ನು ಕೈಬಿಡಬೇಕೆಂದು ಹೇಳಿದ್ದರು. ಆದ್ರೆ ಇದಕ್ಕೆ ಚರಣ್‌ ಸಿಂಗ್‌ ಒಪ್ಪಲಿಲ್ಲ. ಹೀಗಾಗಿ ಕಾಂಗ್ರೆಸ್‌ ಅವರಿಗೆ ನೀಡಿದ್ದ ಬೆಂಬಲ ವಾಪಸ್‌ ಪಡೆದುಕೊಂಡಿತ್ತು. ಹೀಗಾಗಿ ಕೇವಲ 23 ದಿನಕ್ಕೆ ಚರಣ್‌ ಸಿಂಗ್‌ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.  ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಚರಣ್‌ ಸಿಂಗ್‌ ಉಪಪ್ರಧಾನಿಯೂ ಆಗಿದ್ದರು. ಅವರು ಮೇ 29, 1987 ರಂದು ನಿಧನ ಹೊಂದಿದರು.

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್ .ಸ್ವಾಮಿನಾಥನ್

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್ .ಸ್ವಾಮಿನಾಥನ್; ಎಂ.ಎಸ್ ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಪಿತಾಮಹ. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿ ಮಾಡಿದ ಕೀರ್ತಿ ಅವರದ್ದು. ಭಾರತದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ತಮಿಳುನಾಡಿನವರಾದ ಅವರು, 1925ರ ಆಗಸ್ಟ್‌ 7ರಂದು  ಕುಂಬಕೋಣಂನಲ್ಲಿ ಜನಿಸಿದರು.

ಸ್ವಾಮಿನಾಥನ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭಾಷಣ, ಸೇರಿದಂತೆ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಹವಾಮಾನ ತಜ್ಞರು ಕೂಡಾ ಆಗಿದ್ದರು.

Share Post