ಮೊದಲ ರಾತ್ರಿಗೆ ಮಂಚವೇರಿದ್ದ ನವದಂಪತಿ ಹೃದಯಾಘಾತಕ್ಕೆ ಬಲಿ..!
ಲಕ್ನೋ; ಮದುವೆಯಾಗಿ ಮೊದಲ ರಾತ್ರಿಗೆ ಮಂಚವೇರಿದ್ದ ವಧು-ವರರಿಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಹ್ರೈಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ವೈದ್ಯಕೀಯ ಪರೀಕ್ಷೆಯಲ್ಲಿ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
ಪ್ರತಾಪ್ ಯಾದವ್ ಹಾಗೂ ಪುಷ್ಪಾ ಮೃತರು. ಮದುವೆಯ ಮರುದಿನ ಇಬ್ಬರಿಗೂ ಮೊದಲ ರಾತ್ರಿ ಏರ್ಪಡಿಸಲಾಗಿತ್ತು. ಇಬ್ಬರೂ ಖುಷಿಯಿಂದ ಕೊಠಡಿ ಸೇರಿದ್ದರು. ಆದ್ರೆ ಬೆಳಗ್ಗೆ ನೋಡಿದಾಗ ಇಬ್ಬರೂ ಸಾವನ್ನಪ್ಪಿದ್ದರು. ಇಬ್ಬರ ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇಬ್ಬರೂ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.