LifestyleNationalPolitics

ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆ; 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ

ನವದೆಹಲಿ; ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಕೋಟ್ಯಂತರ ಭಕ್ತರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಕೆಲವರು ಈಗಿನಿಂದಲೇ ವ್ರತಗಳನ್ನು ಆರಂಭಿಸುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಇಂದಿನಿಂದ 11 ದಿನಗಳ ಕಾಲದ ವ್ರತ ಆರಂಭಿಸಿದ್ದಾರೆ. 

ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆಯಾಗುವವರೆಗೂ ಮೋದಿಯವರು ವ್ರತ ಆಚರಣೆ ಮಾಡಲಿದ್ದಾರೆ. ಈ ಬಗ್ಗೆ ಮೋದಿಯವರು ಆಡಿಯೋ ಸಂದೇಶವನ್ನು ನೀಡಿದ್ದಾರೆ. ನಾನು ಇಂದಿನಿಂದ ವ್ರತ ಆರಂಭಿಸುತ್ತಿದ್ದೇನೆ. ಪ್ರಭು ಶ್ರೀರಾಮನು ಕಾಲ ಕಳೆದ ಪಂಚವಟಿಯ ನಾಸಿಕ್‌ ಧಾಮದಿಂದ ಈ ವ್ರತವನ್ನು ಶುರು ಮಾಡುತ್ತಿದ್ದೇನೆ. ಸ್ವಾಮಿ ವಿವೇಕಾನಂದರ ಜಯಂತಿಯಂದೇ ನಾನು ವ್ರತ ಆರಂಭಿಸುತ್ತಿರುವುದು ಪ್ರಮುಖ ಸಂಗತಿ ಎಂದು ಮೋದಿ ಹೇಳಿಕೊಂಡಿದ್ದಾರೆ.

ನಾನು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಹೀಗಾಗಿ ಮೊದಲ ಬಾರಿಗೆ ನಾನು ನನ್ನ ಜೀವನದಲ್ಲಿ ಭಾವುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

Share Post