Health

Exam; ಪರೀಕ್ಷೆಯ ವೇಳೆ ಎದುರಿಸುವ ದೃಷ್ಟಿಗೆ ಸಂಬಂಧಿಸಿದ ಸವಾಲುಗಳು

ಬೆಂಗಳೂರು; ಪ್ರೌಢಶಾಲೆಯಲ್ಲಿರುವ ಮಗು ದಿನಕ್ಕೆ ಸರಾಸರಿ 10 ರಿಂದ 14 ಗಂಟೆಗಳ ಕಾಲ ಓದುವುದು ಅಥವಾ ಬರೆಯುವುದರಲ್ಲಿ ಕಳೆಯುತ್ತದೆ. ಪರೀಕ್ಷೆಗಳ ಸಮಯದಲ್ಲಿ 16 ಗಂಟೆಗಳವರೆಗೆ ಹೆಚ್ಚಾಗಬಹುದು. ಶೈಕ್ಷಣಿಕ ಯಶಸ್ಸಿಗೆ ಪರಿಪೂರ್ಣ ದೃಷ್ಟಿ ಅತ್ಯಗತ್ಯವಾದರೂ, ಅದು ಏಕೈಕ ಅಂಶವಲ್ಲ. ಕಣ್ಣಿನಲ್ಲಿರುವ ಅನೇಕ ಅಂಶಗಳಾದ ಗಮನಹರಿಸುವಿಕೆ, ಏಕಾಗ್ರತೆ ಮತ್ತು ವಕ್ರೀಕಾರಕ ದೋಷಗಳನ್ನು ಮೀರಿ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಬೆಂಗಳೂರಿನ ನಾರಾಯಣ ನೇತ್ರಾಲಯ ಮಕ್ಕಳ ಆರೈಕೆಗಾಗಿಯೇ ವಿಶೇಷ ವಿಭಾಗವನ್ನು ತೆರೆದಿದೆ.

ನಾರಾಯಣ ನೇತ್ರಾಲಯವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೀಸಲಾದ ಮಕ್ಕಳ ವಿಭಾಗವನ್ನು ಹೊಂದಿದೆ. ಪ್ರಗತಿಶೀಲ ಸಮೀಪದೃಷ್ಟಿ, ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳು ಮತ್ತು ಮಕ್ಕಳಲ್ಲಿ ಇತರ ಕಣ್ಣಿನ ಪರಿಸ್ಥಿತಿಗಳಿಗೆ ಅತ್ಯುತ್ತಮ ರೋಗನಿರ್ಣಯವನ್ನು ನೀಡುತ್ತದೆ. ರೋಗನಿರ್ಣಯಕ್ಕಾಗಿ ತಜ್ಞರ ಉಪಸ್ಥಿತಿ ಮತ್ತು ಎಲ್ಲಾ ಚಿಕಿತ್ಸಾ ವಿಧಾನಗಳು, ಮನೆಯಲ್ಲಿ ಅಥವಾ ಕಛೇರಿಯಲ್ಲಿ ಕಂಪ್ಯೂಟರ್ ಆಧಾರಿತ ಚಿಕಿತ್ಸೆಗಳು ಸೇರಿದಂತೆ, ಒಂದೇ ಸೂರಿನಡಿ ಮಕ್ಕಳು ಮತ್ತು ಯುವ ವಯಸ್ಕರ ಆರೈಕೆಗೆ ನಮ್ಮ ಸಮಗ್ರ ಚಿಕಿತ್ಸಾ ವಿಧಾನದಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಅಕೊಮ್ಮೊಡೇಟಿವ್ ಸ್ಪಾಸಂ, ಅಕೊಡೇಟಿವ್ ಇನ್‌ಫೆಸಿಲಿಟಿ, ಕನ್ವರ್ಜೆನ್ಸ್ ಇನ್‌ಫಿಷ್ಯಂನ್ಸಿ, ನ್ಯೂಡೋಮಯೋಪಿಯಾ ಮತ್ತು ಸಮೀಪದೃಷ್ಟಿಯ ಹೆಚ್ಚಳದಂತಹ ಸಾಮಾನ್ಯ ಸಮಸ್ಯೆಗಳು ಮಗುವಿನ ಪರೀಕ್ಷೆಯ ಕಾರ್ಯಕ್ಷಮತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಈ ಕಣ್ಣಿನ ಸಮಸ್ಯೆಗಳಿರುವ 50%ಕ್ಕಿಂತ ಹೆಚ್ಚು ರೋಗಿಗಳು 10ನೇ ತರಗತಿ/ಪಿ.ಯು.ಸಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿದ್ದಾರೆ. ದುರದೃಷ್ಟವಶಾತ್, 95% ದೃಷ್ಟಿ ಕೇಂದ್ರೀಕರಿಸುವ ಸಮಸ್ಯೆಗಳು ಅಥವಾ ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳು ದಿನನಿತ್ಯದ ಕಣ್ಣಿನ ಪರೀಕ್ಷೆಗಳಲ್ಲಿ ರೋಗನಿರ್ಣಯ ಮಾಡಲಾಗುವುದಿಲ್ಲ. ಗಮನಿಸದೆ ಬಿಟ್ಟಲ್ಲಿ, ಈ ಸಮಸ್ಯೆಗಳು ಕಣ್ಣಿನ ಆಯಾಸ, ದೌರ್ಬಲ್ಯ, ಕಳಪೆ ಏಕಾಗ್ರತೆ, ಆಗಾಗ್ಗೆ ತಲೆನೋವು, ಎರೆಡೆರೆಡು ದೃಷ್ಟಿ ಮತ್ತು ಮಸುಕಾದ ದೃಷ್ಟಿ ಮುಂತಾದ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಕೇಂದ್ರೀಕರಿಸುವ ಸಮಸ್ಯೆಗಳು ಮತ್ತು ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳ ಜೊತೆಗೆ, ಡಿಜಿಟಲ್ ಪರದೆಗಳ ಅತಿಯಾದ ಬಳಕೆ ಮತ್ತು ಆನ್‌ಲೈನ್ ಅಧ್ಯಯನ ಸಾಮಗ್ರಿಗಳನ್ನು ಓದಲು ಹೆಚ್ಚಿದ ಪರದೆಯ ಸಮಯದಿಂದ ಶುಷ್ಕ ಕಣ್ಣುಗಳು, ಸಮೀಪದೃಷ್ಟಿಯ ಹೆಚ್ಚಾಗುವಿಕೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.

ತೊಂದರೆ ಕಾಣಿಸಿದಾಗ ಕಣ್ಣಿನ ತಪಾಸಣೆ ಅತ್ಯಗತ್ಯ

ಈ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ಪೋಷಕರು ಅಥವಾ ಶಿಕ್ಷಕರು ಅಧ್ಯಯನದಲ್ಲಿ ನಿರಾಸಕ್ತಿ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಅತಿಯಾದ ಹೊರೆಯ ಭಾವನೆಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಕಣ್ಣಿನ ತಪಾಸಣೆಗಳು ಸಾಮಾನ್ಯವಾಗಿ ದೂರದ ದೃಷ್ಟಿಯ ಸಮಸ್ಯೆಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತವೆ, ಹೀಗಾಗಿ ವಿವರವಾದ ಆರ್ಥೋಪ್ಟಿಕ್ ಮೌಲ್ಯಮಾಪನದ ಅಗತ್ಯವಿರುವ ಕಣ್ಣಿನ ಸಮಸ್ಯೆಗಳ ನಿರ್ಣಾಯಕ ರೋಗನಿರ್ಣಯವನ್ನು ಕಳೆದುಕೊಳ್ಳುತ್ತವೆ. ಈ ಮೌಲ್ಯಮಾಪನವು ಕನ್ನಡಕಗಳು, ನಿಗದಿಪಡಿಸಲಾದ ಕಣ್ಣಿನ ವ್ಯಾಯಾಮಗಳು ಮತ್ತು ಅಪರೂಪದ ಸಂದರ್ಭಗಳಲ್ಲಿ, ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ವಿಶೇಷ ಕೇಂದ್ರಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಒಳಗೊಂಡಿರುವ ಸೂಕ್ತವಾದ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.

ಅಧ್ಯಯನ ಮಾಡುವಾಗ ಅನುಸರಿಸಬೇಕಾದ ಅಗತ್ಯಗಳು;

ಮಗುವಿಗೆ ಪ್ರಚೋದಕ ಅಂಶಕ್ಕೆ (ಪರೀಕ್ಷೆಗಳು ಅಥವಾ ಒತ್ತಡ) ಒಡ್ಡಿಕೊಂಡಾಗ ಪ್ರತಿ ಬಾರಿಯೂ ಅಕೊಮ್ಮೊಡೇಟಿವ್ ಸ್ಟಾಸಂ, ಅಕೊಮ್ಮೊಡೇಟಿವ್ ಇನ್‌ಫೆಸಿಲಿಟಿ, ಕನ್ವರ್ಜೆನ್ಸ್ ಇನ್‌ಫಿಷ್ಯಂಗ್ಲಿ ಅಂತಹ ಕಣ್ಣಿನ ಪರಿಸ್ಥಿತಿಗಳು ಮರುಕಳಿಸಬಹುದು. ಹಾಗಾಗಿ ಪರೀಕ್ಷೆಗಳಿಗೆ ಅಧ್ಯಯನ ಮಾಡುವಾಗ ಕೆಲವು ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ:

ಓದುವಾಗ ಕಣ್ಣು ಹಾಗೂ ಪುಸ್ತಕದ ಅಂತರವು 14-16 ಇಂಚುಗಳು ಇರುವ ಹಾಗೆ ಕಾಪಾಡಿಕೊಳ್ಳಬೇಕು

ಆನ್‌ಲೈನ್ ಅಧ್ಯಯನ ಸಾಮಗ್ರಿಗಳಿಗಾಗಿ ಮೊಬೈಲ್ ಫೋನ್‌ ಗಳಂತಹ ಸಣ್ಣ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ.

ಆಗಾಗ್ಗೆ ವಿರಾಮ ತೆಗೆದುಕೊಳ್ಳಲು 20-20-20 ನಿಯಮವನ್ನು ಅನುಸರಿಸಿ.

ವಿರಾಮದ ಸಮಯದಲ್ಲಿ, ಮೊಬೈಲ್ ಫೋನ್ ಬಳಸುವುದನ್ನು ಅಥವಾ ಟಿವಿ ನೋಡುವುದನ್ನು ತಪ್ಪಿಸಿ.

ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ.
ಆರೋಗ್ಯಕರ ಆಹಾರವನ್ನು ಸೇವಿಸಿ

ಸಾಕಷ್ಟು ನಿದ್ರೆಯನ್ನು ಮಾಡಿ.

 

Share Post