ಕರ್ನಾಟಕ-ಕೇರಳ ಗಡಿಯಲ್ಲಿ ಅಯ್ಯಪ್ಪ ಭಕ್ತರ ಆಕ್ರೋಶ
ಮೂಳವಳ್ಳಿ: ಕರ್ನಾಟಕ-ಕೇರಳ ಗಡಿಯಲ್ಲಿ ಕೇರಳ ಸರ್ಕಾರದ ಪೊಲೀಸರು ಅಯ್ಯಪ್ಪ ಭಕ್ತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹಲವರು ಆರೋಪ ಮಾಡ್ತಿದಾರೆ. ಮಕರ ಸಂಕ್ರಾಂತಿ ಸಮಯದಲ್ಲಿ ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ ದರ್ಶನ ಪಡೆಯುವುದಕ್ಕೆ ಹೋಗುವುದು ಪ್ರತಿ ವರ್ಷ ನಡೆಯುವ ಕಾರ್ಯ. ಆದರೆ ಈ ಬಾರಿ ಕೊರೊನಾ ಇರುವುದರಿಂದ ಗಡಿಗಳಲ್ಲಿ ಎರಡೂ ಸರ್ಕಾರ ಸ್ವಲ್ಪ ಬಿಗಿ ಭದ್ರತೆಯನ್ನು ಮಾಡಿದೆ. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ ಎಂದು ರೂಲ್ಸ್ ಮಾಡಿದೆ ಇದರ ವಿರುದ್ಧ ಅಯ್ಯಪ್ಪ ಭಕ್ತರು ಸಿಡಿದೆದ್ದಿದ್ದಾರೆ.
ಕರ್ನಾಟಕ-ಕೇರಳ ಗಡಿಭಾಗ ಮೂಳವಳ್ಳಿ ಚೆಕ್‌ಪೋಸ್ಟ್ನಲ್ಲಿ ಎಲ್ಲಾ ರಾಜ್ಯಗಳ ವಾಹನಗಳು ಸಂಚಾರ ಮಾಡುತ್ತವೆ. ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ವಾಹನಗಳು ಇಲ್ಲಿಂದ ಪಾಸ್ ಆಗುತ್ತವೆ. ಆದರೆ ಅವರ ಯಾರ ಬಳಿಯಲ್ಲೂ ಆರ್‌ಟಿಪಿಸಿಆರ್ ವರದಿ ತೋರಿಸಿ ಎಂದು ಯಾರನ್ನೂ ಕೇಳುತ್ತಿಲ್ಲ. ಕೇವಲ ಶಬರಿಮಲೆಗೆ ಹೋಗಿ ಬರುತ್ತಿರುವ ಅಯ್ಯಪ್ಪನ ಭಕ್ತರನ್ನು ಮಾತ್ರ ವರದಿ ತೋರಿಸಿ ಅಂತ ಗಾಡಿಗಳನ್ನು ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ವರದಿ ಇಲ್ಲದಿದ್ದರೆ ಮತ್ತೆ ಹತ್ತು ಕಿ.ಮೀ.ವಾಪಸ್ ತೆರಳಿದ್ರೆ ಅಲ್ಲಿ ಐನೂರು ರೂಪಾಯಿ ಕೊಟ್ರೆ ನಿಮಗೆ ಆರ್‌ಟಿಪಿಆರ್ ಟೆಸ್ಟ್ ಮಾಡಿ ಕೊಡ್ತಾರೆ ಅದನ್ನ ತೆಗೆದುಕೊಂಡು ಬನ್ನಿ ಎಂದು ವಾಪಸ್ ಕಳಿಸ್ತಾರೆ. ಇಂತಹ ನೀತಿ ನಮಗೆ ಮಾತ್ರ ಯಾಕೆ ಬೇರೆ ವಾಹನಗಳನನು ಪರೀಕ್ಷಿಸದೆ ಹಾಗೆ ಕಳಿಸುತ್ತಿದ್ದಾರೆ. ಅಯ್ಯಪ್ಪ ಭಕ್ತರನ್ನು ಮಾತ್ರ ತಡೆ ಹಾಕುತ್ತಿದ್ದಾರೆ. ಜೊತೆಗೆ ಟೆಸ್ಟ್ ಮಾಡಿಸಲು ನಾವು ಮತ್ತೆ ಕೇರಳಕ್ಕೆ ಹೋಗಬೇಕು ನಮ್ಮ ಆದಾಯ ಕೇರಳ ಸರ್ಕಾರದ ಪಾಲಾಗುತ್ತಿದೆ. ಅದರ ಬದಲು ಇಲ್ಲೇ ಕರ್ನಾಟಕ ಸರ್ಕಾರ ಕೋವಿಡ್ ಪರೀಕ್ಷೆ ಕೇಂದ್ರವನ್ನ ಸ್ಥಾಪನೆ ಮಾಡಿದ್ರೆ ನಾವು ಅಲ್ಲಿಗೆ ಹೋಗುವ ಪರಿಸ್ಥಿತಿ ಬರುವುದಿಲ್ಲ. ಜೊತೆಗೆ ಆದಾಯ ನಮ್ಮ ರಾಜ್ಯಕ್ಕೆ ಸೇರುತ್ತದೆ ಎಂದು ಭಕ್ತರು ಆಗ್ರಹಿಸಿದ್ದಾರೆ.
ಪರೀಕ್ಷೆ ಮಾಡಿದರೆ ಎಲ್ಲಾ ವಾಹನಗಳನ್ನು ಸರಿಯಾಗಿ ಚೆಕ್ ಮಾಡಬೇಕು ಕೇವಲ ಶಬರಿಮಲೆಗೆ ತೆರಳಿರುವ ಅಯ್ಯಪ್ಪ ಭಕ್ತರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ವಿಡಿಯೋ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.