National

ಭಾರತ ಸರಕುಗಳ ರಫ್ತಿನಲ್ಲಿ $400 ಬಿಲಿಯನ್‌ ಡಾಲರ್‌ ಗುರಿ ತಲುಪಿದೆ: ಮೋದಿ ಟ್ವೀಟ್

ದೆಹಲಿ: ನಮ್ಮ ಭಾರತ ಇದೇ ಮೊಟ್ಟ ಮೊದಲ ಬಾರಿಗೆ ಸರಕುಗಳ ರಫ್ತಿನಲ್ಲಿ ಸುಮಾರು  $400 ಬಿಲಿಯನ್ ಡಾಲರ್ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, MSMEಗಳು, ತಯಾರಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ. ಇದು ನಮ್ಮ ಆತ್ಮನಿರ್ಭರ ಭಾರತ ಪಯಣದಲ್ಲಿ ಪ್ರಮುಖ ಮೈಲಿಗಲ್ಲು ಎಂದಿದ್ದಾರೆ.

400 ಬಿಲಿಯನ್‌ ಡಾಲರ್‌ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 30,44,216 ಕೋಟಿ (30.44 ಲಕ್ಷ ಕೋಟಿ). ಟ್ವಿಟರ್​ನಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಭಾರತದ ಸೇವೆ ಮತ್ತು ತಯಾರಿಕೆ ಚಟುವಟಿಕೆ ಫೆಬ್ರವರಿಯಲ್ಲಿ ಸ್ಥಿರವಾಗಿತ್ತು, ಉಕ್ರೇನ್​ ಯುದ್ಧದ ಕಾರ್ಮೋಡದಲ್ಲಿ ಬಳಕೆ ಆಧಾರಿತ ಆರ್ಥಿಕತೆ ದರ ಬೆಳವಣಿಗೆ ಹಾಗೂ ಬೆಲೆಯ ಮಧ್ಯೆ ಈ ಬೆಳವಣಿಗೆ ಆಗಿದೆ ಎಂದಿದ್ದಾರೆ. ಈ ಬಗ್ಗೆ ಸ್ವತಃ ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಮಾಹಿತಿ ತಿಳಿಸಿದ್ದಾರೆ.

Share Post