Cinema

ಮಾಲ್ಡೀವ್ಸ್‌ನಲ್ಲಿ ಕಿಯಾರಾ ಅಡ್ವಾನಿಯ ಹಾಟ್‌ ಫೋಟೋಶೂಟ್

ಮುಂಬೈ : ಇತ್ತೀಚೆಗೆ ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳಿದ್ದ ಕಿಯಾರಾ ಅಡ್ವಾನಿ ತಮ್ಮ ಪ್ರವಾಸದ ಲೇಟೆಸ್ಟ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಕಿಯಾರಾ ಅವರ ಫೋಟೋಗಳು ನೆಟ್ಟಿಗರ ಹುಬ್ಬೇರಿಸಿದೆ.

ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿರುವ ಕಿಯಾರ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು ಬಿಕಿನಿ ತೊಟ್ಟು ಪೋಸ್‌ ಕೂಡ ನೀಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ತಾವು ಎಂಜಾಯ್ ಮಾಡಿರುವ ಕೆಲವು ಫೋಟೋ ಹಾಗೂ ವೀಡಿಯೋವನ್ನು ಶೇರ್‌ ಮಾಡಿರುವ ಕಿಯಾರಗೆ ಮಿಲಿಯನ್‌ ಗಟ್ಟಲೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Post