ವರನ ಅಪ್ಪನಿಗೂ ವಧುವಿನ ತಾಯಿಗೂ ಪ್ರೇಮಾಂಕುರ!; ಮುಂದೇನಾಯ್ತು..?
ಉತ್ತರಪ್ರದೇಶ; ಮದುವೆಗೆ ತಯಾರಿ ನಡೆದಿರುವಾಗ ಅಥವಾ ಮದುವೆ ದಿನ ವಧು ಅಥವಾ ವರ ಪರಾರಿಯಾಗುವ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಸಿಗುತ್ತದೆ.. ಆದ್ರೆ ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ.. ಇಲ್ಲಿ ತಂದೆಯೊಬ್ಬ ತನ್ನ ಮಗನಿಗೆ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡಿದ್ದ.. ಮದುವೆಗೆ ದಿನಾಂಕ ಕೂಡಾ ಹತ್ತಿರ ಬಂದಿತ್ತು.. ಆದ್ರೆ ಈ ನಡುವೆ ಆ ತಂದೆ ತನ್ನ ಮಗನಿಗೆ ನೋಡಿದ್ದ ವಧುವಿನ ತಾಯಿಯೊಂದಿಗೆ ಓಡಿಹೋಗಿದ್ದಾನೆ..
ಇದನ್ನೂ ಓದಿ; Daily Horoscope; ಈ ರಾಶಿಯವರು ಇವತ್ತು ದೂರ ಪ್ರಯಾಣ ಮಾಡಲೇಬಾರದು..!
ಉತ್ತರ ಪ್ರದೇಶದ ಕಾಸ್‌ಗಂಜ್ ಎಂಬಲ್ಲಿ ಈ ಘಟನೆ ನಡೆದಿದೆ.. ವಧುವಿನ ತಾಯಿಯ ಹೆಸರು ಅಸ್ಮಾ ಖಾತುನ್ ಹಾಗೂ ವರನ ತಂದೆ ಹೆಸರು ಶಕೀಲ್.. ತಮ್ಮ ಮಕ್ಕಳ ಮದುವೆಗಾಗಿ ಇವರಿಬ್ಬರು ಮಾತುಕತೆ ನಡೆಸಿದ್ದರು.. ಮಕ್ಕಳಿಗಾಗಿ ಸಂಗಾತಿ ಹುಡುಕುತ್ತಾ ಇವರ ಪರಿಚಯವಾಗಿತ್ತು.. ಅಸ್ಮಾ ಖಾತುನ್ ತನ್ನ ಮಗಳನ್ನು ಶಕೀಲ್ ಮಗನಿಗೆ ಕೊಡಲು ನಿಶ್ಚಯವಾಗಿತ್ತು.. ಎರಡೂ ಮನೆಯವರು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.. ಈ ನಡುವೆಯೇ ಅಸ್ಮಾ ಖಾತುನ್ ಹಾಗೂ ಶಕೀಲ್ ನಡುವೆ ಪ್ರೇಮ ಚಿಗುರಿದೆ… ದೊಡ್ಡವರಾಗಿ ಮಕ್ಕಳಿಗೆ ಆಶೀರ್ವಾದ ಮಾಡಬೇಕಿದ್ದವರೇ ಈಗ ಓಡಿಹೋಗಿದ್ದಾರೆ..
ಇದನ್ನೂ ಓದಿ; ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ 21 ಹಗರಣಗಳ ಮಾಹಿತಿ ಕೊಟ್ಟ ಸಿಎಂ!
ಶಕೀಲ್‌ಗೆ ಈಗಾಗಲೇ ಮದುವೆಯಾಗಿ ಆತನಿಗೆ ಹತ್ತು ಮಕ್ಕಳಿದ್ದಾರೆ.. ಇನ್ನು ವಧುವಿನ ತಾಯಿ ಅಸ್ಮಾಗೂ ಆರು ಮಕ್ಕಳಿದ್ದಾರೆ.. ಆದ್ರೆ ಮಕ್ಕಳ ಭವಿಷ್ಯವನ್ನು ಮರೆತು ಇಬ್ಬರೂ ಚಕ್ಕಂದ ಆಡಲು ಹೋಗಿದ್ದಾರೆ.. ಮದುವೆ ಮಾತುಕತೆಗೆಂದು ಆಗಾಗ ಅಸ್ಮಾ ಮನೆಗೆ ಬರುತ್ತಿದ್ದ ಶಕೀಲ್ ಆಕೆಯನ್ನು ಪ್ರೀತಿಯ ಬೆಲೆಗೆ ಬೀಳಿಸಿಕೊಂಡು ಓಡಿಸಿಕೊಂಡು ಹೋಗಿದ್ದಾನೆ.. ಇನ್ನು ಈ ಘಟನೆ ನಡೆಯುತ್ತಿದ್ದಂತೆ ಅಸ್ಮಾ ಗಂಡ ಶಕೀಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.. ಶಕೀಲ್ ನನ್ನ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ..