National

ಬಡವನಾದ ಅನಂತ ಪದ್ಮನಾಭ: ರಾಜಮನೆತನ ಕಂಗಾಲು

ತಿರುವನಂತಪುರ: ಅನಂತ ಪದ್ಮನಾಭ ಹೆಸರು ಕೇಳಿದ ತಕ್ಷಣ ನೆನಪಾಗೋದು. ಕೊಪ್ಪರಿಗೆ ಕೊಪ್ಪರಿಗೆ ತುಂಬಿರುವ ಹಣ, ಬಂಗಾರ, ವಜ್ರ, ವೈಢೂರ್ಯ ಜೊತೆಗೆ ಅತ್ಯಂತ ಸಿರಿವಂತ ದೇವರೆಂದು. ಆದ್ರೆ ಆ ಸಿರಿವಂತಿಕೆ ಅನಂತನಲ್ಲಿ ಲೀನವಾದಂತಿದೆ. ದೇವಾಲಯದ ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲದ ಪರಿಸ್ಥಿತಿ ಬಂದೊದಗಿದೆ. ಕೊರೊನಾ ಅಬ್ಬರದಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ದೇವಾಲಯದ ಆದಾಯ ತಳಮಟ್ಟಕ್ಕೆ ಇಳಿದಿದೆ.

ದೇವಾಲಯದಲ್ಲಿ ಕೆಲಸ ಮಾಡುವ ೨೦೦ ಮಂದಿ ಸಿಬ್ಬಂದಿಗೆ ತಿಂಗಳಿಗೆ ಒಂದು ಕೋಟಿ ವೇತನ ನೀಡಬೇಕಾಗಿದೆ. ಆದಾಯದಲ್ಲಿ ಕುಸಿತವಾದ್ದರಿಂದ ಸಂಬಳ ಸರಿಯಾಗಿ ನೀಡುತ್ತಿಲ್ಲ ಎಂದು ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸರ್ಕಾರದ ಬಳಿ ಸಹಾಯಹಸ್ತ ಚಾಚಿದ್ದಾರೆ ಟ್ರಸ್ಟ್‌ನ ಅಧ್ಯಕ್ಷರು. ಹಾಗಾಗಿ ಸರ್ಕಾರ ಎರಡು ಕೋಟಿ ರೂಪಾಯಿ ಸಾಲವನ್ನು ಮಂಜೂರು ಮಾಡಿ ಒಂದು ವರ್ಷದಲ್ಲಿ ವಾಪಸ್‌ ಮಾಡುವಂತೆ ಸೂಚನೆ ಕೂಡ ಅಲ್ಲಿನ ಸರ್ಕಾರ ನೀಡಿದೆ.

ಕಾರಣ ದೇವಾಲಯದ ಹಕ್ಕು ಭಾದ್ಯತೆಗಳು ಅಲ್ಲಿನ ಸರ್ಕಾರದ ಬದಲಾಗಿ ತಿರುವಾಂಕೂರಿನ ರಾಜನಮನೆತನಕ್ಕೆ ಸೇರಿದೆ. ದೇವಾಲಯದ ಆಡಳಿತದ ಹಕ್ಕು ರಾಜಮನೆತಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಸರ್ಕಾರಕ್ಕೆ ಇದರ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಷರತ್ತು ಬದ್ದ ನಿಯಮಗಳನ್ನು ಹಾಖಿ ಎರಡು ಕೋಟಿ ರೂಪಾಯಿ ಹಣವನ್ನು ದೇವಾಲಯಕ್ಕೆ ನೀಡಿದೆ.

Share Post