Sports

Ind Vs Sa Test : ಅರ್ಧ ಶತಕ ಬಾರಿಸಿದ ಅಜಿಂಕ್ಯ, ಪೂಜಾರಾ

ವಾಂಡರರ್ಸ್‌ : ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೈಲುಗೈ ಸಾಧಿಸುತ್ತಿದೆ. ಸತತ ವೈಫಲ್ಯ ಕಂಡಿದ್ದ ಪೂಜಾರಾ ಮತ್ತು ಅಜಿಂಕ್ಯ ರಹಾನೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿ ತಮ್ಮ ರನ್‌ ಓಟವನ್ನು ಮುಂದುವರೆಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ ೨೦೨ ರನ್‌ ಗಳಿಸಿ ಆಲೌಟ್‌ ಆಗಿತ್ತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರಾ 3 ರನ್‌ ಗಳಿಸಿದರೆ, ಅಜಿಂಕ್ಯ O ಸುತ್ತಿ ಪೆವಿಲಿಯನ್‌ಗೆ ನಡೆದಿದ್ದರು.

ಇಬ್ಬರನ್ನು ತಂಡದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಅಭಿಪ್ರಾಯಪಟ್ಟಿದ್ದರು. ಇನ್ನು ರಾಹುಲ್‌ ಡ್ರಾವಿಡ್‌ ಅವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಭಾರತದ ಈ ಸ್ಟಾರ್‌ ಆಟಗಾರರ ಬದಲಿಗೆ ಬೇರಾರನ್ನು ಆಡಿಸುವುದು ಎಂಬ ಪ್ರಶ್ನೆ ಕಡಿತ್ತು. ಆದರೆ ಈಗ ಇಬ್ಬರೂ ಒಂದೇ ಇನ್ನಿಂಗ್ಸ್‌ನಲ್ಲಿ ಕ್ಲಿಕ್‌ ಆಗಿರೋ ಕಾರಣ ಭಾರತ ಉತ್ತಮ ಲೀಡ್‌ ಹೊಂದುತ್ತಿದೆ.

ಅಜಿಂಕ್ಯ 58 ರನ್‌ ಗಳಿಸಿ ಔಟಾದರೆ, ಪುಜಾರಾ ಇನ್ನು ಕ್ರೀಸ್‌ನಲ್ಲಿದ್ದಾರೆ.

Share Post