ಕೊರೊನಾ ಹಿನ್ನೆಲೆ: ಸಾರ್ವಜನಿಕ ಸಮಾವೇಶ ಮುಂದೂಡಿದ ಕಾಂಗ್ರೆಸ್
ಲಖನೌ: ಉತ್ತರ ಪ್ರದೇಶದಲ್ಲಿ ಕೂಡಾ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ರಾಜಕೀಯದ ಅಬ್ಬರ ಕಡಿಮೆಯಾಗುತ್ತಿದೆ. ಇಷ್ಟು ದಿನ ಎಲ್ಲಾ ಪಕ್ಷಗಳು, ರ್ಯಾಲಿ, ಪಾದಯಾತ್ರೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ರ್ಯಾಲಿ, ಸಮಾವೇಶಗಳನ್ನು ಮುಂದೂಡಲು ಪಕ್ಷಗಳು ನಿರ್ಧರಿಸುತ್ತಿವೆ. ಕಾಂಗ್ರೆಸ್ ಪಕ್ಷ ಕೂಡಾ ಮ್ಯಾರಥಾನ್ ಸೇರಿದಂತೆ ತನ್ನ ಎಲ್ಲಾ ಸಮಾವೇಶಗಳನ್ನೂ ಮುಂದೂಡಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡಾ ನೋಯ್ಡಾದಲ್ಲಿ ನಡೆದಬೇಕಿದ್ದ ಸಮಾವೇಶವನ್ನು ರದ್ದು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಕಾಂಗ್ರೆಸ್ ಹೇಳಿದೆ. ಇನ್ನು ಉತ್ತರಾಖಂಡ್, ಮಣಿಪುರ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲೂ ವಿಧಾನಸಭಾ ಚುನಾವಣೆ ಸಮೀಪದಲ್ಲಿದೆ. ಇಲ್ಲೂ ಕೂಡಾ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಆದ್ರೆ, ಆ ರಾಜ್ಯಗಳಲ್ಲೂ ಪ್ರಚಾರ ಸಭೆಗಳನ್ನು ಮುಂದೂಡುವ ನಿರ್ಧಾರ ಕೈಗೊಳ್ಳುವುದಾಗಿ ಎಐಸಿಸಿ ನಾಯಕರು ತಿಳಿಸಿದದಾರೆ.