ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು; ಮನೆಯಲ್ಲೇ ಇರುವಂತೆ ಭಾರತ ಸೂಚನೆ
ನವದೆಹಲಿ: ಉಕ್ರೇನ್‌ನಲ್ಲಿ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರನ್ನೆಲ್ಲಾ ಸುರಕ್ಷಿತವಾಗಿ ಕರೆತರಲು ಭಾರತ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಉಕ್ರೇನ್ ನಲ್ಲಿರುವ ಎಲ್ಲಾ ಭಾರತೀಯರೂ ಮನೆಯಲ್ಲೇ ಇರಬೇಕು. ಯಾರೂ ಮನೆಗಳಿಂದ ಹೊರಬರಬೇಡಿ ಎಂದು ಭಾರತ ಮನವಿ ಮಾಡಿಕೊಂಡಿದೆ. ಇನ್ನೊಂದೆಡೆ ಭಾರತ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರುವುದಕ್ಕಾಗಿ ಕಂಟ್ರೋಲ್ ರೂಮ್ ತೆರೆದಿದೆ.
ಇನ್ನು ಏರ್ ಇಂಡಿಯಾ ವಿಮಾನವೊಂದು ಉಕ್ರೇನ್‌ನಿಂದ ಕೆಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದಿದೆ. ಫೆಬ್ರವರಿ 23 ರಂದು ಉಕ್ರೇನ್‌ನಿಂದ 17 ರಾಜಸ್ಥಾನಿಗಳು 2 ವಿಮಾನಗಳ ಮೂಲಕ ತಮ್ಮ ರಾಜ್ಯ ರಾಜಸ್ಥಾನಕ್ಕೆ ಮರಳಿದ್ದಾರೆ. ಅದರಲ್ಲಿ 9 ಮಂದಿ ಜೈಪುರ ವಿಮಾನ ನಿಲ್ದಾಣಕ್ಕೆ ಮತ್ತು 8 ಮಂದಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇಂದು 17 ರಾಜಸ್ಥಾನಿಗಳು ತಮ್ಮ ರಾಜ್ಯಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ಅವರೆಲ್ಲಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.
ಇನ್ನು ಕರ್ನಾಟಕದ ಒಬ್ಬ ವಿದ್ಯಾರ್ಥಿ ಕೂಡಾ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಗದಗ ಜಿಲ್ಲೆ ಮುಂಡರಗಿ ಮಹಾಗಣಪತಿ ಅವರು, ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಸದ್ಯ ಅಲ್ಲೇ ಇದ್ದಾರೆ. ಸುರಕ್ಷಿತವಾಗಿ ಮನೆಯಲ್ಲಿಯೇ ಇದ್ದಾರೆ ಎಂದು ತಿಳಿದುಬಂದಿದೆ.