ಕೋವಿಡ್ ಹೆಚ್ಚಳ ಕಾರಣ – ದೆಹಲಿಯಲ್ಲಿ ಯೆಲ್ಲೋ ಅಲರ್ಟ್
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ದೆಹಲಿ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಮಂಗಳವಾರ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಜನರು ಭಯಪಡಬೇಕಾದ ಅಗತ್ಯ ಇಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಯೆಲ್ಲೋ ಅಲರ್ಟ್ ಅಡಿಯಲ್ಲಿ ರಾತ್ರಿ ಕರ್ಫ್ಯೂ , ಶಾಲೆ ಕಾಲೇಜ್ ಬಂದ್, ಅವಶ್ಯ ವಸ್ತುವಿನಡಿ ಬರದ ಸಾಮಗ್ರಿಗಳ ಅಂಗಡಿಯನ್ನು ದಿನ ಬಿಟ್ಟು ದಿನ ತೆರೆಯಲು ಅವಕಾಶ ನೀಡುವುದು, ಸಾರಿಗೆ ಸಂಚಾರದಲ್ಲಿ ಆಸನ ಸಾಮರ್ಥ್ಯ ಕಡಿಮೆ ಮಾಡುವುದು ಮತ್ತಿತ್ತರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
दिल्ली में कोरोना संक्रमण की मौजूदा स्थिति पर महत्वपूर्ण प्रेस कॉन्फ़्रेंस | LIVE https://t.co/BFIs9ERcQi
— Arvind Kejriwal (@ArvindKejriwal) December 28, 2021