ರಾಕಿ ಭಾಯ್ ಅಭಿಮಾನಿಗಳಿಂದ ಬಿಗ್ ಸಪ್ರೈಸ್, ಏನಾದು ಗೊತ್ತಾ?
ಸ್ಯಾಂಡಲ್ ವುಡ್ : ಸ್ಟಾರ್ ನಟರ ಬರ್ತಡೇ ಬಂದರೆ ಸಾಕು ಅಭಿಮಾನಿಗಳಿಗೆ ಹಬ್ಬದ ವಾತವರಣ ಸೃಷ್ಟಿ ಆಗುತ್ತದೆ. ಅವರ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂದು ಗೊಂದಲದಲ್ಲಿ ಇರುತ್ತಾರೆ.
ನಟರ ಬರ್ತ್ ಡೇ ಹಿಂದಿನ ರಾತ್ರಿಯೇ ಕೇಕ್ ಮತ್ತ ಕಟೌಟ್ ಹಾಕಲು ಸಿದ್ದತೆ ಮಾಡಿಕೊಳ್ಳತ್ತಾರೆ. ಅದೇ ರೀತಿ ಈಗ ಜನವರಿ 8 ರಂದು ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಕಿ ಭಾಯ್ ಅಭಿಮಾನಿಗಳು ರಾಕಿಂಗ್ ಬರ್ತ್‌ಡೇಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕಳೆದ ವರ್ಷ ಯಶ್ ಬರ್ತ್‌ಡೇ ಆಚರಿಸಿಕೊಂಡಿರಲಿಲ್ಲ. ಕೊರೊನಾ ಹಾವಳಿಯಿಂದ ಬರ್ತ್‌ಡೇ ಸೆಲೆಬ್ರೆಷನ್‌ಗೆ ಬ್ರೇಕ್ ಹಾಕಿದ್ದರು. ಈ ಬಾರಿ ಕೂಡ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ರಾಕಿಂಗ್ ಸ್ಟಾರ್ ನಿರ್ಧರಿಸಿದ್ದಾರೆ. ಆದರೂ ಅಭಿಮಾನಿಗಳು ತಮ್ಮದೇ ಸ್ಟೈಲ್‌ನಲ್ಲಿ ನೆಚ್ಚಿನ ನಟನ ಬರ್ತ್‌ಡೇಗೆ ಆಚರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳೇ ಸರ್ಪ್ರೈಸ್ ನೀಡುವುದಕ್ಕೆ ಮುಂದಾಗಿದ್ದಾರೆ.
ಕೆಜಿಎಫ್ ಸಿನಿಮಾ ಇಡಿ ದೇಶದಲ್ಲೇ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಿನಿಮಾ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಯಶ್‌ಗೆ ಈಗ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಬೇರೆ ರಾಜ್ಯಗಳಿಂದ ಅಭಿಮಾನಿಗಳು ಇದ್ದಾರೆ. ಹೀಗಾಗಿ ಈ ಬಾರಿ ಯಶ್ ಹುಟ್ಟುಹಬ್ಬ ರಾಕಿಂಗ್ ಆಗಿರುತ್ತೆ ಅಂತಲೇ ಭಾವಿಸಲಾಗಿತ್ತು. ಈ ಬಾರಿ ಒಮಿಕ್ರಾನ್ ಹಾವಳಿಯಿಂದ ಸ್ವತಃ ಯಶ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಅಭಿಮಾನಿಗಳು ಸುಮ್ಮನಿರಬೇಕಲ್ಲ. ಒಂದು ದಿನ ಮೊದಲೇ ಯಶ್ ಹುಟ್ಟುಹಬ್ಬಕ್ಕೆ ವಿಶೇಷವಾದ ಡಿಪಿಯನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಹೌದು ಜನವರಿ ೭ ರಂದು ಅಭಿಮಾವಿಗಳು ಯಶ್ ಗೆ ಬಿಗ್ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ರಾತ್ರಿ 10.15ಕ್ಕೆ ಬರ್ತ್‌ಡೇ ಡಿಪಿ ಬಿಡುಗಡೆ ಮಾಡಲು ಯಶ್ ಅಭಿಮಾನಿಗಳ ಗುಂಪೊಂದು ನಿರ್ಧರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಅನೌನ್ಸ್ ಮಾಡಿಕೊಂಡಿದೆ