ಮಗುವಿನ ಲಿಂಗ ಪತ್ತೆಗೆ ಪತ್ನಿಯ ಹೊಟ್ಟೆ ಸೀಳಿದ ಪಾಪಿ ಗಂಡ!
ಲಖನೌ; ಗರ್ಭಿಣಿಯಾಗಿರುವ ಪತ್ನಿಯ ಹೊಟ್ಟೆಯಲ್ಲಿ ಯಾವ ಮಗು ಇದೆ ಎಂದು ತಿಳಿಯಲು ಪಾಪಿ ಗಂಡನೊಬ್ಬ ಆಕೆಯ ಹೊಟ್ಟೆಯಲ್ಲೇ ಸೀಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಇಲ್ಲಿ ಬುಡೌನ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಅನಿತಾ ದೇವಿ ಎಂಬಾಕೆಯ ಹೊಟ್ಟೆಯನ್ನು ಆಕೆ ಪತಿ ಪನ್ನಾ ಲಾಲ್ ಸೀಳಿದ್ದಾನೆ.. ಅನಿತಾ ದೇವಿಯನ್ನು ದೆಹಲಿಯ ಸಫ್ದರ್ ಜಂಗ್ ನ ಹಾಸ್ಪಟಲ್‌ಗೆ ಸೇರಿಸಲಾಗಿತ್ತು.. ವಾರ್ಡ್‌ನಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಪಾಪಿ ಪತಿ ಅನಿತಾ ದೇವಿಯ ಹೊಟ್ಟೆ ಸೀಳಿದ್ದಾನೆ.. ಈ ಕೂಡಲೇ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಕೂಡಲೇ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದಾರೆ..
ಘಟನೆಯ ಬಗ್ಗೆ ತಿಳಿದುಕೊಂಡ ಬದೌನ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ.. ಇದರಿಂದಾಗಿ ಮಹಿಳೆಯ ಹೊಟ್ಟೆಯಲ್ಲಿದ್ದ ಗಂಡು ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.. ಪನ್ನಾ ಲಾಲ್ ವಿರುದ್ಧ ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿದ್ದಾಗಿ ಸೆಕ್ಷನ್ 307 ಮತ್ತು 313ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅನಿತಾದೇವಿಗೆ ಈಗಾಗಲೇ ಐದು ಹೆಣ್ಣು ಮಕ್ಕಳಿದ್ದವು.. ಆರನೇಯದೂ ಹೆಣ್ಣ ಮಗುವಾಗಬಹುದು ಎಂಬ ಭಯದಿಂದ ಆರೋಪಿ ಹೀಗೆ ಮಾಡಿದ್ದಾರೆ ಎನ್ನಲಾಗಿದೆ..