CrimeNational

ಫ್ಲಾಟ್‌ ಫಾರ್ಮ್‌ಗೆ ನುಗ್ಗಿದ ಸರ್ಕಾರಿ ಬಸ್‌; ಬಸ್‌ಗೆ ಕಾಯುತ್ತಿದ್ದ ಇಬ್ಬರ ದುರ್ಮರಣ

ವಿಜಯವಾಡ; ಆಂಧ್ರಪ್ರದೇಶದ ವಿಜಯವಾಡದಲ್ಲಿ ಬಸ್‌ ಚಾಲಕನ ಅಜಾಗರೂಕತೆಯಿಂದ ಇಬ್ಬರ ಪ್ರಾಣ ಹೋಗಿದೆ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ ನೇರವಾಗಿ ಫ್ಲಾಟ್‌ ಫಾರ್ಮ್‌ಗೆ ನುಗ್ಗಿದ್ದು, ಬಸ್‌ಗಾಗಿ ಕಾಯುತ್ತಿದ್ದ ಇಬ್ಬರು ಸಾವನಪ್ಪಿದ್ದಾರೆ. ಪಂಡಿತ್ ನೆಹರು ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

ಬಸ್‌ ಪ್ಲಾಟ್‌ಫಾರ್ಮ್‌ ಮೇಲಿನ ರೈಲಿಂಗ್‌ ದಾಟುತ್ತಿದ್ದಂತೆ ಬಸ್‌ ಚಕ್ರದಡಿ ಸಿಲುಕಿ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಏಕಾಏಕಿ ಬಸ್ ಬಂದಿದ್ದರಿಂದ ಪ್ರಯಾಣಿಕರು ಭಯದಿಂದ ಓಡಿದ್ದಾರೆ.

      ವಿಜಯವಾಡದಿಂದ ಗುಂಟೂರಿಗೆ ಹೋಗುತ್ತಿದ್ದ ಎಸಿ ಸರ್ವೀಸ್ ಬಸ್ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಆರ್‌ಟಿಸಿ ಮೂಲಗಳ ಪ್ರಕಾರ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ನಿಜವಾದ ಕಾರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಆರ್‌ಟಿಸಿ ಅಧಿಕಾರಿಗಳು ಘೋಷಿಸಿದ್ದಾರೆ. ಪ್ಲಾಟ್‌ಫಾರ್ಮ್ ನಂಬರ್ 12ರಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

Share Post