ತಿರುಪತಿ ಬೆಟ್ಟ ಹತ್ತುತ್ತಿದ್ದಾಗ ಭಕ್ತನಿಗೆ ಕಚ್ಚಿದ ಹಾವು!
ತಿರುಪತಿ; ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.. ಅದರಲ್ಲಿ ಸಾವಿರಾರು ಮಂದಿ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುತ್ತಾರೆ.. ಈ ವೇಳೆ ಚಿರತೆಯಂತಹ ಪ್ರಾಣಿಗಳ ಉಪಟಳ ಕೊಡುವುದನ್ನು ಆಗಾಗ ನೋಡಿದ್ದೇವೆ.. ಇದೀಗ ಹಾವೊಂದು ಭಕ್ತನೊಬ್ಬನಿಗೆ ಹಾವೊಂದು ಕಚ್ಚಿದೆ..
ತಿರುಮಲ ಶ್ರೀಗಳ ದರ್ಶನಕ್ಕೆಂದು ಪಾದಚಾರಿ ಮಾರ್ಗದಲ್ಲಿ ತೆರಳುತ್ತಿದ್ದ ಭಕ್ತನೊಬ್ಬನಿಗೆ ಹಾವು ಕಚ್ಚಿದೆ. ಚೀರಾಲುನಿಂದ ಬಂದಿದ್ದ ಕೆಲವು ಭಕ್ತರು ಅಲಿಪಿರಿ ಮೆಟ್ಟಿಲುಗಳ ಮೂಲಕ ತಿರುಮಲಕ್ಕೆ ತೆರಳುತ್ತಿದ್ದರು. ಈ ವೇಳೆ ಏಳನೇ ಮೈಲಿನಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಮೆಟ್ಟಿಲುಗಳ ಮೇಲೆ ಹಾವು ಬಂದಿದೆ.. ಮೆಟ್ಟಿಲುಗಳ ಮೇಲೆ ವಿಶ್ರಮಿಸುತ್ತಿದ್ದ ನಾಗೇಂದ್ರ ಎಂಬ ಭಕ್ತನಿಗೆ ಕಚ್ಚಿದೆ. ಈ ವೇಳೆ ಶ್ರೀಗಳ ಭಕ್ತರೆಲ್ಲರೂ ಭಯಭೀತರಾಗಿ ಕಿರುಚಿಕೊಂಡರು. ಭಕ್ತರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಟಿಟಿಡಿ ಹಾಗೂ ಅರಣ್ಯ ಸಿಬ್ಬಂದಿ ಹಾವು ಕಚ್ಚಿದ ಯುವಕನನ್ನು ತಿರುಮಲದ ಅಶ್ವಿನಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನಿಗೆ ಕಚ್ಚಿದ ಹಾವು ವಿಷಕಾರಿಯಲ್ಲದ ಕಾರಣ ಅನಾಹುತ ತಪ್ಪಿದೆ. ಸದ್ಯ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.