National

TRAIN FIRE: ಸ್ವಾತಂತ್ರ್ಯ ಸೇನಾನಿ ರೈಲಿಗೆ ಬೆಂಕಿ; ಧಗಧಗ ಹೊತ್ತಿ ಉರಿದ ಟ್ರೈನ್‌

ಮಧುಬನಿ: ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ರೈಲಿಗೆ ಹಠಾತ್ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ದೆಹಲಿಯಿಂದ ಮಧುಬನಿಗೆ ಬಂದಿದ್ದ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ರೈಲಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ವಾತಂತ್ರ್ಯ ಸೇನಾನಿ ರೈಲು ರಾತ್ರಿಯೇ ದೆಹಲಿಯಿಂದ ಮಧುಬನಿ ರೈಲು ನಿಲ್ದಾಣಕ್ಕೆ ಬಂದಿತ್ತು. ಖಾಲಿ ರೈಲು ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾ ಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

Share Post