Districts

ಸಿದ್ದರಾಮಯ್ಯಗೆ ಗೆಲ್ಲೋ ವಿಶ್ವಾಸ ಇಲ್ಲ, ಅದಕ್ಕೆ ಕ್ಷೇತ್ರ ಹುಡುಕಾಟ; ಬಿಎಸ್‌ವೈ

ತುಮಕೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಇದ್ದ ಕ್ಷೇತ್ರ ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ..? ಗೆಲ್ತೀನಿ ಅನ್ನೋ ವಿಶ್ವಾಸ ಇಲ್ಲದೇನೆ ಬೇರೆ ಜಾಗ ಹುಡುಕೋ ಪ್ರಯತ್ನ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಯಡಿಯೂರಿನಲ್ಲಿ ಪತ್ನಿ ಮೈತ್ರಾದೇವಿ ಹೆಸರಿನ ಕಲ್ಯಾಣ ಮಂಟಪ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮಾತನಾಡಿದರು. ಪತ್ನಿ ಮೈತ್ರಾದೇವಿ ಹೆಸರಿನಲ್ಲಿ ಯಡಿಯೂರಿನಲ್ಲಿ ಬಡವರಿಗಾಗಿ ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ನನ್ನ ಬಹುದಿನದ ಕನಸಾಗಿತ್ತು. ಅದು ಈಗ ಈಡೇರಿದೆ. ಸಾಂಕೇತಿಕ ಹಣಕೊಟ್ಟು ಬಡವರು ಮದುವೆ ಮಾಡಿಕೊಳ್ಳಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ ಎಂದು ಹೇಳಿದರು.

ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವ್ರು, ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ಪತ್ರ ಬರೆದು ಸಿಎಂ ಬೊಮ್ಮಾಯಿಯವರು ಆಹ್ವಾನ ಮಾಡಿದ್ದಾರೆ. ಗೌಡರಿಗೂ ಪತ್ರ ಬರೆಯಲಾಗಿತ್ತು. ಜೊತೆಗೆ ಸಿಎಂ ಬೊಮ್ಮಾಯಿಯವರು ಖುದ್ದಾಗಿ ದೂರವಾಣಿ ಕರೆ ಮಾಡಿ ಆಹ್ವಾನ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದರು.

Share Post