LifestyleNational

ಅಯೋಧ್ಯೆಯಲ್ಲಿ 24 ಅರ್ಚಕರ ನೇಮಕ; ಇದರಲ್ಲಿ ಇಬ್ಬರು ಎಸ್‌ಸಿ, ಒಬ್ಬರು ಒಬಿಸಿ!

ಅಯೋಧ್ಯೆ; ಇದೇ ಜನವರಿ 22ಕ್ಕೆ ಆಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಈ ಬೆನ್ನಲ್ಲೇ ರಾಮಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲು 24 ಅರ್ಚಕರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಇಬ್ಬರು ಎಸ್‌ಸಿ ಸಮುದಾಯಕ್ಕೆ ಸೇರಿದವರು ಹಾಗೂ ಒಬ್ಬರು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಮೂರು ತಿಂಗಳು ತರಬೇತಿ ನೀಡಲಿದ್ದು, ಅನಂತರ ಅರ್ಚಕರಾಗಿ ನಿಯೋಜನೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಅರ್ಚಕರು ತರಬೇತಿಯಲ್ಲಿದ್ದು, ಗುರುಕುಲದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಯ್ಕೆಯಾಗಿರುವ ಅರ್ಚಕರು ಮೊಬೈಲ್‌ ಬಳಸುವಂತಿಲ್ಲ ಹಾಗೂ ಹೊರಗಿನವರೊಂದಿಗೆ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂಬ ನಿಯಮವನ್ನು ಇಡಲಾಗಿದೆ. ಇನ್ನು ಈ ಹುದ್ದೆಗಳಿಗಾಗಿ ಅರ್ಜಿಗಳನ್ನು ಕರೆಯಲಾಗಿತ್ತು. ಸುಮಾರು 3240 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಸಂದರ್ಶನದಲ್ಲಿ 14 ಪ್ರಶ್ನೆಗಳನ್ನು ಕೇಳಲಾಗಿದ್ದು, ಸರಿಯಾಗಿ ಉತ್ತರ ಕೊಟ್ಟು 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಎಂಬುವವರು ಹಿಂದೆ ಸರಿದಿದ್ದಾರೆ. ಹೀಗಾಗಿ ಉಳಿದ 24 ಮಂದಿಗೆ ತರಬೇತಿ ನೀಡಲಾಗುತ್ತಿದೆ.

 

Share Post