Districts

ಕಾಡಾನೆ ಹಿಂಡಿನ ದಾಳಿಗೆ ಅಡಕೆ ತೋಟ ಗದ್ದೆ ಸರ್ವನಾಶ: ಆತಂಕದಲ್ಲಿ ಗ್ರಾಮಸ್ಥರು

ಉತ್ತರಕನ್ನಡ: ಕಾಡಾನೆಗಳ ಹಾವಳಿ ಹೊಸದೇನಲ್ಲ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ನಿನ್ನೆ ಮೊನ್ನೆಯದಲ್ಲ…ಆಹಾರ ಹರಿಸಿ ಗ್ರಾಮಗಳತ್ತ ಆನೆಗಳ ಹಿಂಡು ಬರುತ್ತಲೇ ಇದಾವೆ. ಇವುಳ ಹಾವಳಿಗೆ ರೈತರು, ಗ್ರಾಮಸ್ಥರು ಹೈರಾಣಾಗುತಿದ್ದಾರೆ. ಬೆಳೆ ಫಸಲು ಕೊಡುವ ಸಮಯಕ್ಕೆ ಕೈಗೆ ಸಿಗದಂತೆ ಎಲ್ಲವನ್ನು ತುಳಿದು ನಅಶ ಮಾಡುತ್ತಿವೆ. ಇತ್ತ ಹಾಸನ, ಸಕಲೇಶಪುರ, ಮಡಿಕೇರಿ, ಮಂಗಳೂರು ಸೇರಿದಂತೆ ಹಲವು ಕಡೆ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದೆ.

ಇಂದು ಕೂಡ ಉತ್ತರಕನ್ನಡ ಜಿಲ್ಲೆಯ ಕಾಡಾನೆ ಹಿಂಡು ಗ್ರಾಮಕ್ಕೆ ಲಗ್ಗೆ ಇಟ್ಟು ಅಡಕೆ ತೋಟ ಹಾಗೂ ಗದ್ದೆಯನ್ನು ಸಂಪೂರ್ಣ ನಾಶಮಾಡಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಆನೆಗಳ ಓಡಾಟದಿಂದ ಗ್ರಾಮಸ್ತರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯವನನು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಆನೆಗಳನ್ನು ಪುನಃ ಕಾಡಿಗೆ ಅಟ್ಟುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅದುವರೆಗೂ ಗ್ರಾಮಸ್ಥರು ಯಾರೂ ತೋಟಗಳ ಕಡೆಗೆ ತೆರಳದಂತೆ ಸೂಚನೆ ನೀಡಿದ್ದಾರೆ.

Share Post