CinemaNational

ರತನ್‌ ಟಾಟಾ ಬಯೋಪಿಕ್‌ ತೆಗೀತಾರಂತೆ ಸೂರರೈ ಪೊಟ್ರು ನಿರ್ದೇಶಕಿ ಸುಧಾ

ಮುಂಬೈ; ಸೂರರೈ ಪೊಟ್ರು ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕಿ ಸುಧಾ ಕೊಂಗರ ಹಸೊ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಖ್ಯಾತ ಉದ್ಯಮಿ ರತನ್‌ ಟಾಟಾ ಅವರ ಬಯೋಪಿಕ್‌ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ.

ರತನ್ ಟಾಟಾ ಅವರು ದೇಶದ ಅತ್ಯಂತ ಪ್ರಖ್ಯಾತ ಉದ್ಯಮಿ. ರತನ್‌ ಟಾಟಾ ಜೀವನ ಶೈಲಿ ಬಗ್ಗೆ ಎಲ್ಲರಿಗೂ ಕುತೂಹಲ ಕೂಡಾ ಇದೆ. ಹೀಗಾಗಿ ರತನ್‌ ಟಾಟಾ ಅವರ ಬಗ್ಗೆ ಜನಕ್ಕೆ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಹೇಳಲು ನಿರ್ದೇಶಕಿ ಸುಧಾ ಹೊರಟಿದ್ದಾರೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆಯಂತೆ. 2023ರ ಕೊನೆಯಲ್ಲಿ ಶೂಟಿಂಗ್‌ ಶುರು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Share Post