National

ಪ್ರಧಾನಿ ಮೋದಿ ಯುಎಇ ಪ್ರವಾಸ ರದ್ದು

ದೆಹಲಿ: ದೇಶದಲ್ಲಿ ಕೊರೋನಾ ಹಾಗೂ ರೂಪಾಂತರಿ ತಳಿ ಒಮಿಕ್ರಾನ್‌ ಹೆಚ್ಚಳದ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ರದ್ದುಗೊಂಡಿದೆ. ಜನವರಿ ೬ ರಂದು ಪ್ರಧಾನಿ ಮೋದಿ ಅವರು ಅರಬ್‌ ಸಂಯುಕ್ತ ಸಂಸ್ಥಾನ ಯುಎಇ ಪ್ರವಾಸ ಕೈಗೊಂಡಿದ್ದರು. ಇದು ಹೊಸ ವರ್ಷದ ಮೊದಲ ಪ್ರವಾಸವಾಗಿತ್ತು. ಆದರೆ ಕೊರೋನಾ ಹೆಚ್ಚಳವಾಗುತ್ತಿದ್ದು, ಅತೀ ವೇಗದಲ್ಲಿ ಹರಡುತ್ತಿರವ ಒಮಿಕ್ರಾನ್‌ ಭೀತಿಯಿಂದ ಅವರು ಪ್ರವಾಸ ಸದ್ಯಕ್ಕೆ ಮುಂದೂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Share Post