ರಾಜಕೀಯ ನಾಯಕರ ತಳ್ಳಾಟ..ನೂಕಾಟ:ವಿಡಿಯೋ ವೈರಲ್
ಜೋರ್ಡಾನ್: ರಾಜಕೀಯ ಕೆಸರೆರಚಾಟ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದೆ. ಇದಕ್ಕೆ ನಿದರ್ಶನ ಜೋರ್ಡಾನ್ ಪಾರ್ಲಿಮೆಂಟ್ನಲ್ಲಿ ನಡೆದ ಗಲಾಟೆ ಹೌದು ಸಂಸತ್ ಕಲಾಪದಲ್ಲಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಲಕಾಲ ಸಂತ್‌ನಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು. ಸಾಂವಿಧಾನಿಕ ಸುಧಾರಣೆಗಳ ಸಂಬಂಧಿಸಿದಂತೆ ಗದ್ದಲ ನಡೆದಿದೆ.
ಕೆಲವು ತಿದ್ದುಪಡಿಗಳ ವಿಚಾರವಾಗಿ ವಾಗ್ವಾದ ನಡೆದು ಅದು ಗಲಾಟೆ ಹಂತಕ್ಕೆ ತಲುಪಿದೆ ಎಂದು ಮಾಧ್ಯಗಳು ವರದಿ ಮಾಡಿವೆ. ಅಮ್ಮಾನ್‌ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಡೆದ ಬಿಸಿ ಚರ್ಚೆಯ ಸಂದರ್ಭದಲ್ಲಿ ಸಂಸದರು ಕೋಪದಿಂದ ಈ ತಿದ್ದುಪಡಿ ‘ನಿಷ್ಪ್ರಯೋಜಕ’ ಎಂದು ಕಿರುಚಾಟ ನಡೆಸಿದ್ದಾರೆ. ಬಳಿಕ ಸಂಸದರು ಪರಸ್ಪರ ಹೊಡೆದಾಡಿಕೊಂಡು ತಳ್ಳಾಟ..ನೂಕಾಟ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಜನಪ್ರತಿನಿಧಿಗಳೇ ಹೀಗೆ ನಡೆದುಕೊಂಡ್ರೆ ಇನ್ನು ಸಾಮಾನ್ಯ ಜನರ ಗತಿಯೇನು ಎಂದು ಪ್ರಜೆಗಳು ಛೀಮಾರಿ ಹಾಕಿದ್ದಾರೆ. ಗಲಾಟೆ ನಡುವೆ ಅಧಿವೇಶನವನ್ನು ನಾಳೆಗೆ ಮುಂದೂಡುವಂತೆ ಒತ್ತಾಯ ಮಾಡಿದ್ರು.