National

ಪ್ರಧಾನಿ ಮೋದಿ ಭದ್ರತಾ ವೈಫಲ್ಯ; ತನಿಖೆಗೆ ಆದೇಶಿಸಿದ ಪಂಜಾಬ್‌ ಸರ್ಕಾರ

ಚಂಡೀಗಢ: ನಿನ್ನೆ ಪ್ರಧಾನಿ ಮೋದಿಯವರು ಪಂಜಾಬ್‌ಗೆ ಆಗಮಿಸಿದ್ದಾಗ ಭದ್ರತಾ ವೈಫಲ್ಯವಾಗಿತ್ತು. ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಕಾರಿಗೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದರು. ಈ ಸಂಬಂಧ ತನಿಖೆ ನಡೆಸಲು ಪಂಜಾಬ್‌ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ಪಂಜಾಬ್‌ ಸರ್ಕಾರ ರಚನೆ ಮಾಡಿದ್ದು, ಮೂರು ದಿನದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.

      ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಫಿರೋಜ್‌ಪುರಕ್ಕೆ ಆಗಮಿಸಿದ್ದರು. ಈ ವೇಳೆ ಮೋದಿಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು. ಪ್ರಧಾನಿ ಮೋದಿಯವರು ಸುಮಾರು ಅರ್ಧ ಗಂಟೆ ಕಾಲ ಫ್ಲೈಓವರ್‌ ಮೇಲೆ ಸಿಲುಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಸಿಎಂ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡಾ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡಿದ್ದರು. ಆದ್ರೆ ಪಂಜಾಬ್‌ ಮುಖ್ಯಮಂತ್ರಿ ಮಾತ್ರ, ಯಾವುದೇ ಭದ್ರತಾ ವೈಫಲ್ಯ ಆಗಿಲ್ಲ. ಪ್ರಧಾನಿಯನ್ನು ನಾನು ಗೌರವಿಸುತ್ತೇನೆ. ಹಾಗೇನಾದರೂ ಭದ್ರತಾ ವೈಫಲ್ಯವಾಗಿದ್ದಿದ್ದರೆ ನಾನು, ನನ್ನ ಎದೆ ಕೊಡುತ್ತಿದ್ದೆ ಎಂದು ಹೇಳಿದ್ದರು.

ಇನ್ನು ಕೇಂದ್ರ ಗೃಹಸಚಿವಾಲಯ ಘಟನೆ ಬಗ್ಗೆ ವರದಿ ಕೊಡಿ ಎಂದು ಪಂಜಾಬ್‌ ಸರ್ಕಾರವನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಪಂಜಾಬ್‌ ಸರ್ಕಾರ ಈಗ ತನಿಖೆಗೆ ಆದೇಶ ನೀಡಿದೆ.  ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್‌ ಸಿಂಗ್‌ ಗಿಲ್‌ ಹಾಗೂ ಗೃಹ ವ್ಯವಹಾರಗಳ ಪ್ರಧಾನಕಾರ್ಯದರ್ಶಿಯೂ ಆಗಿರುವ ನ್ಯಾಯಮೂರ್ತಿ ಅನುರಾಗ್‌ ವರ್ಮಾ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.

Share Post