ಪಂಜಾಬ್ ಸಿಎಂ ಅಳಿಯನ ಮನೆ ಮೇಲೆ ಇ.ಡಿ. ದಾಳಿ
ನವದೆಹಲಿ : ಪಂಜಾಬ್‌ನ ಮರಳು ಮಾಫಿಯಾ ಅಡ್ಡೆಗಳ ಮೇಲೆ ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ಮಾಡಿದೆ. ಫೆಬ್ರುವರಿಯಲ್ಲಿ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಇಡಿ ಈ ದಾಳಿ ನಡೆಸಿದೆ.
ಚುನಾವಣೆ ಇರುವ ಕಾರಣ ಅಕ್ರಮ ಹಣ ವರ್ಗಾವಣೆಯ ದೂರುಗಳು ಬಂದಿರುವ ಕಾರಣ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫೆಬ್ರುವರಿ 20 ರಂದು ಒಂದೇ ಹಂತದಲ್ಲಿ ಪಂಜಾಬ್ ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ.
ಪಂಜಾಬ್ ಸಿಎಂ ಆಗಿರುವ ಚರಣ್‌ಜಿತ್ ಸಿಂಗ್ ಚೆನ್ನಿ ಅವರ ಅಳಿಯ ಭೂಪೇಂದ್ರ ಸಿಂಗ್ ಹನಿ ಅವರ ಮೇಲೆ ಅಕ್ರಮ ಹಣ ವರ್ಗಾವಣೆ ಮತ್ತು ಮರಳು ದಂಧೆಯ ಆರೋಪಗಳು ಕೇಳಿ ಬಂದಿದ್ದ ಕಾರಣ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
10 ರಿಂದ 12 ಅಕ್ರಮ ಮರಳು ಅಡ್ಡೆಗಳ ದಾಳಿ ಮಾಡಿರುವ ಇಡಿ ಅಧಿಕಾರಿಗಳು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಶಕ್ಕೆ ತೆಗೆದುಕೊಂಡವರಲ್ಲಿ ಬಹುತೇಕರಿಗೆ ರಾಜಕೀಯ ನಂಟಿದೆ ಎಂದು ಹೇಳಲಾಗ್ತಿದೆ.