12 ಗಂಟೆ ವಿಮಾನದಲ್ಲೇ ಲಾಕ್ ಆದ ಪ್ರಯಾಣಿಕರು!; ದೆಹಲಿಯಿಂದ ಬೆಂಗಳೂರಿಗೆ ಬರಲೇ ಇಲ್ಲ!
ದೇವನಹಳ್ಳಿ; ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ಸಂಜೆ 7.40ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಪ್ರಯಾಣಿಕರು ಸುಮಾರು 12 ಗಂಟೆಗಳ ಕಾಲ ಲಾಕ್ ಆಗಿ ಪರದಾಡಿದ್ದಾರೆ.. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಿಂದ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನ ನಿನ್ನೆ ರಾತ್ರಿ 7.40ಕ್ಕೆ ಟೇಕಾಫ್ ಆಗಬೇಕಿತ್ತು.. ಆದ್ರೆ, ಇಂದು ಬೆಳಗ್ಗೆ 7 ಗಂಟೆಯಾದರೂ ವಿಮಾನ ಟೇಕಾಫ್ ಆಗಿಲ್ಲ.. ಸಾಲದೆಂಬಂತೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಹೊರಬಿಡದೇ ರಾತ್ರಿಯೆಲ್ಲಾ ವಿಮಾನದಲ್ಲಿ ಕೂರಿಸಲಾಗಿತ್ತು ಎಂದು ತಿಳಿದುಬಂದಿದೆ..
SG 8151ನ ಸ್ಪೈಸ್ಜೆಟ್ ಏರ್ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.. ಇದ್ರಲ್ಲಿ ಸುಮಾರು 60 ಪ್ರಯಾಣಿಕರಿದ್ದು, 12 ಗಂಟೆಗಳಿಗೂ ಹೆಚ್ಚು ಸಮಯ ಅವರು ವಿಮಾನದಲ್ಲೇ ಕಳೆದಿದ್ದಾರೆ.. ವಿಮಾನದ ಬಾಗಿಲು ತೆಗೆಯದೇ, ಜೊತೆಗೆ ಅವರಿಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡದೇ ವಿಮಾನದಲ್ಲೇ ಕೂರಿಸಲಾಗಿದೆ.. ತಾಂತ್ರಿಕ ದೋಷದ ನೆಪವೊಡ್ಡಿ ಈ ರೀತಿ ಮಾಡಲಾಗಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ..
ಏನಾಗಿದೆ ಎಂಬುದರ ಮಾಹಿತಿಯೂ ಸಿಗದೇ ಪ್ರಯಾಣಿಕರು ಪರದಾಡಿದ್ದಾರೆ.. ವಿಮಾನ ಹೈಜಾಕ್ ಆಗಿದೆಯಾ ಎಂದೂ ಪ್ರಶ್ನೆ ಮಾಡಿದ್ದಾರೆ.. ಇನ್ನು ಏಳೆಂಟು ಬಾರಿ ಬೋರ್ಡಿಂಗ್ ಪಾಸ್ ಬದಲಾಯಿಸಿರುವ ಆರೋಪ ಕೂಡಾ ಕೇಳಿ ಬಂದಿದೆ..