LifestyleNational

ಗಂಡನ ಎರಡನೇ ಮದುವೆಗೆ ಪತ್ನಿಯೇ ಮುಂದಾಳತ್ವ!

ಹೈದರಾಬಾದ್; ಗಂಡ ಬೇರೆಯವಳ ಜೊತೆ ಮಾತನಾಡಿದರೇನೇ ಹೆಂಡತಿ ಸಹಿಸೋದಿಲ್ಲ. ಅಂತಹದ್ದರಲ್ಲಿ ಇಲ್ಲೊಬ್ಬ ಮಹಿಳೆ, ತಾನೇ ಮುಂದೆ ನಿಂತು ತನ್ನ ಗಂಡನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ.. ಅದೂ ಕೂಡಾ ಹೆಂಡತಿಯೇ ಗಂಡನನ್ನು ಒಪ್ಪಿಸಿ ಈ ಮದುವೆ ಮಾಡಿಸಿರೋದು ವಿಶೇಷ ಹಾಗೂ ಅಚ್ಚರಿ.. ತೆಲಂಗಾಣದ ಮೆಹಬೂಬಾಬಾದ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಮೊದಲ ಹೆಂಡತಿ ಹಾಗೂ ಇತರೆ ಸಂಬಂಧಿಕರ ಎದುರಿನಲ್ಲೇ ಅದ್ದೂರಿಯಾಗಿ ಈ ಮದುವೆ ಮಾಡಿಸಲಾಗಿದೆ..

ಇದನ್ನೂ ಓದಿ; ಮಲಗಿದ್ದ ತಾಯಿಯನ್ನು ಕೊಂದೇಬಿಟ್ಟ ಪಾಪಿ ಮಗ!

ಸುರೇಶ್‌ ಹಾಗೂ ಸರಿತಾ ಎಂಬುವವರು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಒಂದು ಗಂಡು ಮಗು ಕೂಡಾ ಇದೆ.. ಈ ನಡುವೆ ಗಂಡ ಸುರೇಶ್‌ಗೆ ಸಂಧ್ಯಾ ಎಂಬ ಯುವತಿಯ ಮೇಲೆ ಲವ್‌ ಆಗಿದೆ.. ಸುರೇಶ್‌ ಅವರ ಸಂಬಂಧಿಕರ ಮಗಳೇ ಈ ಸಂಧ್ಯಾ.. ಈಕೆ ಕೊಂಚ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ.. ಆದರೂ ಸುರೇಶ್‌ ಇಷ್ಟಪಟ್ಟಿದ್ದಾನೆ.. ಇತ್ತ ಸಂಧ್ಯಾ ಕೂಡಾ ಆತನನ್ನು ಇಷ್ಟಪಟ್ಟಿದ್ದಾಳೆ.. ಇದನ್ನು ತಿಳಿದ ಸುರೇಶ್‌ ಹೆಂಡತಿ ಸರಿತಾ, ತನ್ನ ಗಂಡನ ಜೊತೆ ಸಂಧ್ಯಾಳಿಗೆ ಮದುವೆ ಮಾಡಿಸಲು ಮುಂದಾಗಿದ್ದಾಳೆ.. ಸರಿತಾಗೂ ಕೊಂಚ ಮಾನಸಿಕ ಅಸ್ವಸ್ಥೆಯಾಗಿರುವ ಸಂಧ್ಯಾ ಬಗ್ಗೆ ವಿಶೇಷ ಕಾಳಜಿ ಇದೆಯಂತೆ.. ಹೀಗಾಗಿ ತನ್ನ ಮನೆಯಲ್ಲೇ ಆಕೆ ಇದ್ದರೆ ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ಆಕೆಯನ್ನು ತನ್ನ ಗಂಡನ ಜೊತೆಯೇ ಮದುವೆ ಮಾಡಿಸಿದ್ದಾಳೆ..

ಇದನ್ನೂ ಓದಿ; ಅಳಿಯ ಮನೆಗೆ ಬಂದಿದ ನಿವೃತ್ತ ಶಿಕ್ಷಕಿಯನ್ನು ಕಚ್ಚಿ ಸಾಯಿಸಿದ ನಾಯಿಗಳು!

ನಾನು ಮಾನವೀಯತೆಯಿಂದ ಈ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದೇವೆ. ಸಂಧ್ಯಾ ಕೂಡಾ ನನ್ನ ತಂಗಿಯಂತೆಯೇ.. ಹೀಗಾಗಿ ನನಗೆ ಯಾವುದೇ ದುಃಖ ಎಂದು ಸರಿತಾ ಹೇಳಿಕೊಂಡಿದ್ದಾರೆ…

 

Share Post