ಅತಿಯಾದ ಪಾಲಾಕ್ ಸೊಪ್ಪಿನ ಸೇವನೆ ಆರೋಗ್ಯಕ್ಕೆ ಹಾನಿಕರ
ಉತ್ತಮ ಆಹಾರ..ಉತ್ತಮ ಆರೋಗ್ಯಕ್ಕೆ ನಾಂದಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ..ಅತಿಯಾದ್ರೆ ಅಮೃತ ಕೂಡ ವಿಷ ಅನ್ನೋದು ಕೂಡ ಗೊತ್ತು. ಹಣ್ಣು, ಸೊಪ್ಪು, ತರಕಾರಿಗಳು ಎಲ್ಲವೂ ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸೇವಿಸಬೇಕು ಅತಿಯಾಗಿ ಸೇವಿಸಿದ್ರೆ ಅದು ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ.
ಈಗ ನಾವು ಹೇಳಲು ಹೊರಟಿರುವ ವಿಚಾರ ಪಾಲಾಕ್ ಸೊಪ್ಪಿಗೆ ಸಂಬಂಧಿಸಿದ್ದು, ಪಾಲಾಕ್ ಅತ್ಯಂತ ಪೌಷ್ಟಿಕಾಂಶದ ಎಲೆಗಳ ತರಕಾರಿಗಳಲ್ಲಿ ಒಂದಾಗಿದೆ. ಈ ಸೊಪ್ಪು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಕೂಡ ನೀಡುತ್ತದೆ. ಪಾಲಾಕ್ ಆಹಾರದಲ್ಲಿ ಬಳಸಲು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಇದರಲ್ಲಿ ವಿಟಮಿನ್ ಎ, ಫೋಲೇಟ್, ವಿಟಮಿನ್ ಸಿ, ಕ್ಯಾಲ್ಸಿಯಂ, ಫೋಲಿಕ್ ಆಸಿಡ್ ಮತ್ತು ಐರನ್ ಹೆಚ್ಚಾಗಿರುತ್ತದೆ.
ಪಾಲಕ್ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಜವಾದರೂ, ಅತಿಯಾಗಿ ತಿನ್ನುವುದರಿಂದ ಕೆಲವೊಂದು ದುಷ್ಟರಿಣಾಮಗಳನ್ನು ಕೂಡ ಎದುರಿಸಬೇಕಾಗುತ್ತದೆ. ಪಾಲಕ್ ಸೊಪ್ಪಿನ ಹೆಚ್ಚಿನ ಸೇವನೆಯು ದೇಹದಲ್ಲಿ ಆಕ್ಸಾಲಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಆ ಅಂಶ ನಮ್ಮ ದೇಹದಿಂದ ಹೊರಹಾಕಲು ಸಾಧ್ಯವಾಗದಿದ್ದಾಗ. ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡಗಳಲ್ಲಿ ಕಲ್ಲುಗಳ ರೂಪದಲ್ಲಿ ಪರಿವರ್ತನೆಯಾಗುತ್ತದೆ.
ನಿಮಗೆ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಇದ್ದರೆ ನೀವು ಸರಿಯಾದ ಪ್ರಮಾಣದಲ್ಲಿ ಪಾಲಾಕ್ ತಿನ್ನಬೇಕು. ಆದರೆ ಅದು ಅತಿಯಾಗಬಾರದಷ್ಟೇ. ಪಾಲಾಕ್ ಆಕ್ಸಾಲಿಕ್ ಆಮ್ಲ ಮತ್ತು ಪ್ಯೂರಿನ್ ಎಂಬ ಎರಡು ಅಂಶಗಳ ಸಂಯುಕ್ತವಾಗಿದೆ. ಈ ಎರಡೂ ಸಂಯುಕ್ತಗಳ ಮಿಶ್ರಣ ಸಂಧಿವಾತಕ್ಕೆ ಕಾರಣವಾಗಬಹುದು. ಈಗಾಗಲೇ ಸಂಧಿವಾತ, ಉರಿಯೂತದಿಂದ ಬಳಲುತ್ತಿರುವವರು ಪಾಲಕ್ ಸೊಪ್ಪನ್ನು ಸೇವಿಸಿದರೆ ಸಮಸ್ಯೆ ಉಲ್ಬಣಿಸಬಹುದು. ಮತ್ತು ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅಪೌಷ್ಟಿಕತೆ, ಅಲರ್ಜಿಯಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ಪಾಲಾಕ್ ಸೇವನೆ ಅಥವಾ ಒಂದು ದಿನದಲ್ಲಿ ಹಲವಾರು ಬಾರಿ ಈ ಸೊಪ್ಪನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ಕಾಲು ಸೆಳೆತವ ಉಂಟಾಗಬಹುದು. ಹಾಗಾಇ ಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.