CinemaCrimeHealth

ದರ್ಶನ್‌ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಯ್ತಾ..?; ಇಳಿದ ತೂಕವೆಷ್ಟು..?

ಬೆಂಗಳೂರು; ರೇಣುಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಬಂಧನವಾಗಿ ಹದಿನೈದು ದಿನಗಳು ಆಗುತ್ತಾ ಬಂದಿದೆ.. ಇಷ್ಟು ದಿನದಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.. ಸರಿಯಾಗಿ ನಿದ್ದೆ, ಸೂಕ್ತ ಊಟ, ವ್ಯಾಯಾಮ ಇಲ್ಲದೆ ಅವರು ಸೊರಗಿದ್ದಾರೆ.. ಬಂಧನದ ದಿನದಿಂದ ಇಂದಿಗೆ ದರ್ಶನ್‌ ತೂಕದಲ್ಲಿ ಒಂದು ಕೆಜಿ ಇಳಿಕೆಯಾಗಿದೆ.. ಜೊತೆಗೆ ಬಿಪಿಯಲ್ಲೂ ವ್ಯತ್ಯಾಸ ಕಂಡುಬಂದಿದೆ ಎಂದು ತಿಳಿದುಬಂದಿದೆ..

ಪೊಲೀಸರ ವಶದಲ್ಲಿರುವ ದರ್ಶನ್‌ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.. ಅದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.. ಈ ವೇಳೆ ಅವರ ತೂಕ 106 ಕೆಜಿ ಇರುವುದು ಗೊತ್ತಾಗಿದೆ.. ಜೂನ್​ 11ರಂದು ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರ ತೂಕ 107 ಕೆಜಿ ಇತ್ತು.. ಅಂದಿನಿಂದ ಇವತ್ತಿಗೆ ಅವರು ಒಂದು ಕೆಜಿ ತೂಕ ಇಳಿದಿದ್ದಾರೆ..

ದರ್ಶನ್‌ ನಾನ್‌ವೆಜ್‌ ಪ್ರಿಯರು ಯಾವಾಗಲೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು.. ದೇಹ ದಂಡನೆ ಮಾಡುತ್ತಿದ್ದರು.. ಈಗ ಅದೆಲ್ಲಾ ನಿಂತು ಹೋಗಿದೆ.. ಪೊಲೀಸರು ಕೊಡುವ ಆಹಾರವನ್ನೇ ತಿನ್ನ ಬೇಕು.. ಇದರ ಜೊತೆ ಚಿಂತೆ ಕೂಡಾ ಶುರುವಾಗಿದೆ.. ಸರಿಯಾಗಿ ನಿದ್ದೆಯೂ ಆಗಿಲ್ಲ.. ಇನ್ನು ದರ್ಶನ್‌ ಬಿಪಿ ಮಟ್ಟದಲ್ಲೂ ಕೂಡಾ ವ್ಯತ್ಯಾಸ ಆಗಿದ್ದು, ಅದಕ್ಕೆ ಔಷಧಿ ನೀಡಲಾಗಿದೆ.. ಇದರಿಂದಾಗಿ ಬಿಪಿ ನಾರ್ಮಲ್‌ ಆಗಿದೆ ಎಂದು ತಿಳಿದುಬಂದಿದೆ..

 

Share Post