Lifestyle

ಯಶಸ್ವಿ ವ್ಯಕ್ತಿಗಳು ಬೆಳಗ್ಗೆ ತಪ್ಪದೇ ಈ ಏಳು ಕೆಲಸಗಳನ್ನು ಮಾಡ್ತಾರಂತೆ!!

ಯಾರಿಗೂ ಸಮ್ಮನೆ ಯಶಸ್ಸು ಸಿಗೋದಿಲ್ಲ.. ಯಶಸ್ಸಿ ಸಿಗಬೇಕಂದ್ರೆ ಪರಿಶ್ರಮ ಇರಬೇಕು, ಜೀವನದಲ್ಲಿ ಶಿಸ್ತು ಇರಬೇಕು.. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ವ್ಯವಸ್ಥಿತ ದಿನಚರಿ ಇರಬೇಕು.. ಹೀಗಾಗಿಯೇ ಯಶಸ್ವಿ ವ್ಯಕ್ತಿಗಳ ದಿನಚರಿಯನ್ನು ನೋಡಿ ಮೊದಲು ಕಲಿತುಕೊಳ್ಳಬೇಕು.. ಅವರ ಜೀವನ ಶೈಲಿಯನ್ನು ಪಾಲಿಸಿದರೆ ಪ್ರತಿಯೊಬ್ಬರಿಗೂ ಯಶಸ್ಸು ಸಿಗಲಿದೆ.. ಹೀಗಾಗಿಲೇ ಯಶಸ್ಸಿಗಾಗಿ ಬೆಳಗ್ಗೆ 8 ಗಂಟೆಯ ಒಳಗೆ ಮಾಡಲೇಬೇಕಾದ ಏಳು ಕೆಲಸಗಳನ್ನು ಮನೋವಿಜ್ಞಾನ ಪಟ್ಟಿ ಮಾಡಿದೆ..

ಯಶಸ್ವಿ ವ್ಯಕ್ತಿಗಳು ಬೆಳಗ್ಗೆಯೇ ಮಾಡುವ ಏಳು ಕೆಲಸಗಳು ಯಾವುವು..?

ಎದ್ದಾಕ್ಷಣ ಪರಿಸರವನ್ನು ಆನಂದಿಸಿ;

ಬೆಳಗ್ಗೆ ಎದ್ದಾಕ್ಷಣ ಮನಸ್ಸಿಗೆ ನೆಮ್ಮದಿ, ಶಾಂತಿ ಬೇಕು.. ಹೀಗಾಗಿ, ಎದ್ದ ತಕ್ಷಣ ಹೊರಗಿನ ಪರಿಸರ, ಪಕ್ಷಗಳ ಚಿಲಿಪಿಲಿ ಕೇಳಿಸಿಕೊಳ್ಳಬೇಕು.. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.. ಜೀವನದಲ್ಲಿ ಉತ್ಸಾಹ ಉಂಟಾಗಲಿದೆ.. ಹೊಸ ಹೊಸ ಐಡಿಯಾಗಳು, ಆಲೋಚನೆಗಳು ಬರಲು ಶುರುವಾಗುತ್ತವೆ.. ಮುಂದೆ ಮಾಡಬೇಕಾದ ಕೆಲಸಗಳಿಗೆ ಪಾಸಿಟಿವ್‌ ಎನರ್ಜಿ ಸಿಗಲಿದೆ..

ವ್ಯಾಯಾಮ ಅತ್ಯಂತ ಅವಶ್ಯಕ;

ಯಶಸ್ಸು ಪಡೆದವರು ಎಂದಿಗೂ ಸೋಮಾರಿಗಳಾಗುವುದಿಲ್ಲ.. ಏನಾದರೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ.. ಏನಾದರೊಂದು ಕಲಿಯುತ್ತಿರುತ್ತಾರೆ.. ಇದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನೂ ಅವರು ಮರೆಯುವುದಿಲ್ಲ.. ಹೀಗಾಗಿ ಬೆಳಗ್ಗೆ ಎಂಟು ಗಂಟೆಗೂ ಮೊದಲ ದೇಹ ದಂಡನೆ ಮಾಡಬೇಕು.. ವ್ಯಾಯಾಮ ಮಾಡಿದರೆ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ..

ಒಳ್ಳೆಯ ಆಹಾರ ಸೇವನೆ;

ಯಶಸ್ವಿ ವ್ಯಕ್ತಿಗಳು ಎದ್ದ ತಕ್ಷಣ ಏನೋ ಒಂದು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದಿಲ್ಲ.. ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.. ಅವರು ಆರೋಗ್ಯಕರ ಉಪಾಹಾರಗಳನ್ನೇ ಸೇವನೆ ಮಾಡುತ್ತಾರೆ.. ನಾವು ಮಾಡುವ ಆಹಾರ ನಮ್ಮ ಮನಸ್ಥಿತಿಯನ್ನು ನಿರ್ಧಾರ ಮಾಡುತ್ತದೆ.. ಒಳ್ಳೆಯ ಆಹಾರ ತಿಂದಾಗ ನಾವು ಮಾನಸಿಕ ಸದೃಢರಾಗುತ್ತೇವೆ.. ಎಲ್ಲಾ ಕೆಲಸಗಳೂ ಸುಗಮವಾಗಿ ನಡೆಯುತ್ತವೆ..

ಪುಸ್ತಕಗಳನ್ನು ಓದುವುದು ಒಳ್ಳೆಯದು;

ಯಶಸ್ವಿ ವ್ಯಕ್ತಿಗಳು ಕಲಿಕೆಯನ್ನು ನಿಲ್ಲಿಸುವುದಿಲ್ಲ.. ಅವರು ನಿರಂತರವಾಗಿ ಕಲಿಯುತ್ತಲೇ ಇರುತ್ತಾರೆ.. ಅವರು ಸ್ಪೂರ್ತಿ ತುಂಬುವ ಪುಸ್ತಕಗಳನ್ನು ಓದುತ್ತಾರೆ..ಬೆಳಗ್ಗೆ ನ್ಯೂಸ್‌ ಪೇಪರ್‌ಗಳನ್ನು ಓದುತ್ತಾರೆ.. ಬೇರೆ ಬೇರೆ ಮೂಲಗಳಿಂದ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ.. ಈ ಮೂಲಕ ಪ್ರತಿದಿನ ಒಂದೊಂದನ್ನು ಕಲಿಯುತ್ತಾ ಹೋಗುತ್ತಾರೆ..

ದಿನದ ಶೆಡ್ಯೂಲ್‌ ರೂಪಿಸುತ್ತಾರೆ;

ಈ ದಿನ ಏನೇನು ಕೆಲಸ ಇದೆ..ಯಾವ ಕೆಲಸ ಯಾವಾಗ ಮಾಡಬೇಕು.. ಯಾವುದಕ್ಕೆ ಎಷ್ಟು ಸಮಯ ಕೊಡಬೇಕು.. ಯಾರನ್ನು ಭೇಟಿಯಾಗಬೇಕು.. ಇತ್ಯಾದಿಗಳ ಶೆಡ್ಯೂಲ್‌ ಮಾಡಿಕೊಳ್ಳುತ್ತಾರೆ.. ಅದರಂತೆ ದಿನವನ್ನು ಆರಂಭ ಮಾಡುತ್ತಾರೆ..

ನಮಗೆ ಸಿಕ್ಕಿದ್ದರ ಬಗ್ಗೆ ಕೃತಜ್ಞತಾ ಭಾವ;

ತುಂಬಾ ಜನ ನಮ್ಮಲ್ಲಿ ಏನೂ ಇಲ್ಲ ಎಂದು ಕೊರಗುತ್ತಾ ಇರುತ್ತಾರೆ.. ಆದ್ರೆ ಯಶಸ್ವಿ ವ್ಯಕ್ತಿಗಳು ಹಾಗೆ ಎಂದೂ ಯೋಚಿಸುವುದಿಲ್ಲ.. ಸದ್ಯ ನಮಗೆ ಏನು ಸಿಕ್ಕಿದೆಯೋ ಅದಕ್ಕೆ ಕೃತಜ್ಞರಾಗಿರುತ್ತಾರೆ.. ನಾವು ಏನು ಅನುಭವಿಸುತ್ತಿದ್ದೇವೆಯೋ ಅದಕ್ಕೆ ನಾವು ಕೃತಜ್ಞರಾಗಿರಬೇಕೆಂದು ಅವರು ಹೇಳಿಕೊಡುತ್ತಾರೆ..

 

 

Share Post