Districts

ಪ್ರೇಮಿಗಳ ದಿನ ಕಾಂಗ್ರೆಸ್‌ಗೆ ಡಿವೋರ್ಸ್‌, ಬೇರೆ ಪಕ್ಷದ ಜತೆ ಲವ್‌; ಸಿ.ಎಂ.ಇಬ್ರಾಹಿಂ

ಮೈಸೂರು: ಫೆಬ್ರವರಿ 14ರಂದು ಪ್ರೇಮಿಗಳ ದಿನ. ಅಂದೇ ನಾನು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಯಾವ ಪಕ್ಷವನ್ನು ಲವ್‌ ಮಾಡುತ್ತೇನೆ ಎಂದೂ ಆವತ್ತೇ ಹೇಳುತ್ತೇನೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ನನ್ನ ಸ್ಥಿತಿಯೇ ಎದುರಾಗಲಿದೆ ಎಂದರು. ಇನ್ನು ಪಕ್ಷ ಬಿಡುವ ತೀರ್ಮಾನ ಮಾಡಿದ ನಂತರ ಸಿದ್ದರಾಮಯ್ಯ ಅವರು ನಿಮ್ಮ ಜೊತೆ ಮಾತನಾಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

 

Share Post