Bengaluru

ವಿವಿ ಆವರಣದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ: ವಿದ್ಯಾರ್ಥಿ ಸಂಘಟನೆಗಳ ಕಿಡಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ, ಮರುಮೌಲ್ಯಮಾಪನ, ಹಾಸ್ಟೆಲ್‌ ಸೌಲಭ್ಯ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ವು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು. ಪೊಲೀಸರು ಲಾಠಿಚಾರ್ಜ್‌ ಕೂಡ ಮಾಡಿದ್ರು. ಈ ಹಿನ್ನೆಲೆಯಲ್ಲಿ ಈಗ ವಿವಿ ಆವರಣದಲ್ಲಿ ಪ್ತಯಿಭಟನೆಗೆ ಅವಕಾಶವಿಲ್ಲ ಎಂದು ವಿವಿ ಸುತ್ತೋಲೆ ಹೊರಡಿಸಿದೆ.

ರಾಜಕೀಯ ಪ್ರೇರಿತ  ಸಂಘಟನೆಗಳಿಗೆ ಅವಕಾಶವಿಲ್ಲ ಎಂದು ಸುತ್ತೋಲೆ ಹೊರಡಿಸಿರುವುದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕೂಡಲೇ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು. ಬೆಂಗಳೂರು ವಿವಿ ಸಮಸ್ಯೆಗಳ ಆಗರವಾಗಿದೆ. ಮೊದಲು ಇಲ್ಲಿರವ ಸಮಸ್ಯೆಗಳನ್ನು ಬಗೆಹರಿಸಿ, ನಮ್ಮ ಪ್ರತಿಭಟನೆಗಳನ್ನು ಉಆರೂ ಹತ್ತಿಕ್ಕುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಮಾಡೇ ಮಾಡ್ತೇವೆ ಎಂದು ABVP, NSUI, SFI, CFI ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

Share Post