ಸಾಲ ಹೆಚ್ಚಾಗಲು ಮನೆಯಲ್ಲಿನ ಈ ವಸ್ತುಗಳೇ ಕಾರಣ
ಮನೆಯಲ್ಲಿ ವಾಸ್ತು ಸರಿ ಇಲ್ಲದಿದ್ದರೆ ಸಮಸ್ಯೆಗಳು ಕಟ್ಟಿಟ್ಟ ಬತ್ತಿ.. ಮನೆ ಆಗಿ ಬಂದರೆ ಎಲ್ಲವು ಚೆನ್ನಾಗಿರುತ್ತೆ ಅಂತ ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು.. ಈಗ ವಾಸ್ತು ನೋಡಿ ಮನೆಗೆ ಪ್ರವೇಶಿಸುತ್ತಾರೆ.. ವಾಸ್ತು ಮನೆಯಲ್ಲಿರುವ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತದೆ.. ಅಷ್ಟೇ ಅಲ್ಲ, ಮನೆಯಲ್ಲಿ ಆರ್ಥಿಕ ಸ್ಥಿತಿಯೂ ಇದರಿಂದಾನೆ ನಿರ್ಧಾರವಾಗುತ್ತೆ..
ಮನೆಯಲ್ಲಿಂದ ಕೊಠಡಿಗಳು, ಮನೆಯಲ್ಲಿ ಜೋಡಿಸುವ ವಸ್ತುಗಳು ನಮ್ಮ ಮೇಲೆ ಪ್ರಭಾವ ಬೀಳುತ್ತವೆ..
ಹೊಸ ಮನೆ ಕಟ್ಟುವವರು, ಬಾಡಿಗೆ ಮನೆಗೆ ಹೋಗುವವರು ಕೂಡಾ ವಾಸ್ತು ನೋಡ್ತಾರೆ.. ಆರ್ಥಿಕವಾಗಿ ಹೇಳುವುದಾದರೆ, ಕೆಲವು ವಿಧದ ವಾಸ್ತು ದೋಷಗಳು ಸಾಲದ ಸಮಸ್ಯೆಗಳನ್ನು ಹೆಚ್ಚಿಸುತ್ತವೆ. ಚೆನ್ನಾಗಿದ್ದವರು ಮನೆ ಬದಲಿಸಿದ ಮೇಲೆ ಸಾಲ ಹೆಚ್ಚಾಯಿತು ಅಂದ್ರೆ ಅದಕ್ಕೆ ವಾಸ್ತುನೆ ಕಾರಣ ಎಂದು ಹೇಳಬಹುದು..
* ಮನೆಯಲ್ಲಿ ಈಶಾನ್ಯ ದಿಕ್ಕಿಗೆ ಹೆಚ್ಚಿನ ಆದ್ಯತೆ ನೀಡಿ ಎನ್ನುತ್ತಾರೆ ತಜ್ಞರು. ಈ ದಿಕ್ಕಿಗೆ ವಿಶೇಷ ಗಮನ ನೀಡಬೇಕು ಎಂದು ವಾಸ್ತು ಪಂಡಿತರು ಶಿಫಾರಸು ಮಾಡುತ್ತಾರೆ. ಈಶಾನ್ಯದಲ್ಲಿ ಯಾವುದೇ ವಸ್ತುಗಳನ್ನು ಇಡಬಾರದು. ಅಲ್ಲದೆ ಈ ದಿಕ್ಕನ್ನು ಕಸ ಹಾಕದೆ ಸ್ವಚ್ಛವಾಗಿಟ್ಟುಕೊಳ್ಳಬೇಕು.
* ಮನೆಯ ಆಗ್ನೇಯ ಮೂಲೆಯನ್ನು ಸಂಪತ್ತಿನ ಸಂಕೇತವೆಂದು ಹೇಳಲಾಗುತ್ತದೆ. ಈ ದಿಕ್ಕಿನ ವಸ್ತುಗಳು ಸಂಪತ್ತನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ವಾಸ್ತು ಪಂಡಿತರು ಹೇಳುತ್ತಾರೆ. ಅದಕ್ಕಾಗಿಯೇ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಸ್ಥಾಪಿಸಿದರೆ, ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ನೀವು ಸಾಲದಿಂದ ಮುಕ್ತರಾಗಬಹುದು.
* ವಾಸ್ತುವಿನಲ್ಲಿ ದಿಕ್ಕು ಬಹಳ ಮುಖ್ಯ. ವೃತ್ತಿಯಲ್ಲಿ ಪ್ರಗತಿ ಸಾಧಿಸಲು ವ್ಯಾಪಾರದ ಜೊತೆಗೆ ಉತ್ತರ ದಿಕ್ಕಿನತ್ತ ಗಮನ ಹರಿಸಲು ತಜ್ಞರು ಸಲಹೆ ನೀಡುತ್ತಾರೆ. ಮನೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬೆಳಕು ಮತ್ತು ಗಾಳಿ ಉತ್ತರದಿಂದ ಬರುವಂತೆ ನೋಡಿಕೊಳ್ಳಿ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.
* ಗೋಡೆಗಳಿಗೆ ಹಚ್ಚುವ ಬಣ್ಣಗಳ ವಿಷಯದಲ್ಲಿ ಹಲವು ಸೂಚನೆಗಳನ್ನು ಪಾಲಿಸಬೇಕು ಎನ್ನುತ್ತಾರೆ ವಿದ್ವಾಂಸರು. ಮನೆಯಲ್ಲಿ ಆದಷ್ಟು ತಿಳಿ ಬಣ್ಣಗಳಿರುವಂತೆ ನೋಡಿಕೊಳ್ಳಿ ಎನ್ನುತ್ತಾರೆ.
* ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದರೆ, ಶ್ರೀಮಂತರಾಗಬೇಕೆಂದರೂ ಮನೆಯಲ್ಲಿ ಕೆಲವು ರೀತಿಯ ವಸ್ತುಗಳನ್ನು ಜೋಡಿಸಿಟ್ಟುಕೊಳ್ಳಬೇಕು ಎನ್ನುತ್ತಾರೆ ವಾಸ್ತು ಪಂಡಿತರು. ಲಾಫಿಂಗ್ ಬುದ್ಧ ಮತ್ತು ಆಮೆಯಂತಹ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಸ್ಪಷ್ಟ ಬದಲಾವಣೆಯನ್ನು ಕಾಣಬಹುದು.