CrimeNational

ಆಸ್ಪತ್ರೆಗೆ ನುಗ್ಗಿ ರೋಗಿಯ ಮೇಲೆ ಗುಂಡು ಹಾರಿಸಿ ಭೀಕರ ಕೊಲೆ!

ನವದೆಹಲಿ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.. ಇಲ್ಲಿನ ಗುರುತೇಜ್‌ ಬಹದ್ದೂರ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿ ನಾಪತ್ತೆಯಾಗಿದ್ದಾನೆ..

ಇದನ್ನೂ ಓದಿ; ಸಾಲ ಹೆಚ್ಚಾಗಲು ಮನೆಯಲ್ಲಿನ ಈ ವಸ್ತುಗಳೇ ಕಾರಣ

ಜೂನ್‌ 23 ರಂದು ರಿಯಾಜುದ್ದಿನ್‌ ಎಂಬುವವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.. ಆದ್ರೆ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ 18 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ಎಂಟ್ರಿ ಕೊಟ್ಟಿದ್ದು, ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.. ಇದರಿಂದಾಗಿ ರಿಯಾಜುದ್ದಿನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಅಮೆರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಗುಂಡಿನ ದಾಳಿ!

ಕೊಲೆಯಾದ ರಿಯಾಜುದ್ದಿನ್‌ ಎಂಬಾತ ಡ್ರಗ್‌ ಅಡಿಕ್ಟ್‌ ಆಗಿದ್ದು, ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ.. ಈ ಕಾರಣಕ್ಕಾಗಿಯೇ ಆತನಿಂದ ಬಾಂಧಿತನಾದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.. ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

Share Post