LifestyleNationalNewsPolitics

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ

ತಿರುಪತಿ; ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ರಾಷ್ಟ್ರವನ್ನು ಸಮೃದ್ಧಿ ಮತ್ತು ಪ್ರಗತಿಯತ್ತ ಮುನ್ನಡೆಸು, ಎಲ್ಲರ ಬಾಳಲ್ಲಿ ಸುಖ, ಶಾಂತಿ ಮತ್ತು ಆರೋಗ್ಯ ಕೊಡೋ ಭಗವಂತ ಪ್ರಧಾನಿ ಮೋದಿ ತಿಮ್ಮಪ್ಪನಲ್ಲಿ ಬೇಡಿಕೊಂಡಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದ ಮೋದಿ, ದೇಗುಲದಲ್ಲಿ ಕೆಲಕಾಲ ಕಳೆದರು.

  ಶ್ರೀವಾರಿ ದೇಗುಲಕ್ಕೆ ಆಗಮಿಸಿದ ಮೋದಿಯವರಿಗೆ ಟಿಟಿಡಿ ಅಧ್ಯಕ್ಷ ಭೂಮ್ಮನ ಕರುಣಾಕರ ರೆಡ್ಡಿ ಮಹಾದ್ವಾರದ ಬಳಿ ಅದ್ಧೂರಿ ಸ್ವಾಗತ ಕೋರಿದರು. ದೇವರ ದರ್ಶನದ ಬಳಿಕ ದೇವಸ್ಥಾನದ ವಿದ್ವಾಂಸರಿಂದ ವೈದಿಕ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅರ್ಚಕರು ಮೋದಿ ಅವರಿಗೆ ಪ್ರಸಾದ ನೀಡಿದರು.

ರಂಗಮಂದಿರದ ವೇದಿಕೆಯಲ್ಲಿ ಪುರೋಹಿತರು ಪ್ರಧಾನಿ ಮೋದಿ ಅವರಿಗೆ ವೇದ ಶ್ಲೋಕ ಪಠಿಸಿದರು.

Share Post