HealthLifestyle

ರಾತ್ರಿ ಊಟದ ನಂತರ ವಾಕಿಂಗ್‌ ಹೇಗೆ ಮಾಡಬೇಕು..?; ಇದರಿಂದ ಏನು ಲಾಭ..?

ತುಂಬಾ ಜನರಿಗೆ ರಾತ್ರಿ ವೇಳೆ ವಾಕಿಂಗ್ ಮಾಡುವ ಅಭ್ಯಾಸ ಇರುತ್ತದೆ. ಊಟ ಮಾಡಿದ ನಂತರ ಐದು ನಿಮಿಷಗಳಷ್ಟಾದರೂ ನಡೆಯುತ್ತಿರುತ್ತಾರೆ. ರಾತ್ರಿ ವೇಳೆ ಮಲಗುವುದಕ್ಕೂ ಮೊದಲು ವಾಕಿಂಗ್ ಮಾಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ಊಟ ಮಾಡಿದ ನಂತರ ತಕ್ಷಣವೇ ಕುಳಿತುಕೊಳ್ಳುವುದು, ಮಲಗಿಕೊಳ್ಳುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕೂಡ ಬರುತ್ತವೆ. ಆದ್ದರಿಂದ ಊಟ ಮಾಡಿದ ನಂತರ ರಿಲಾಕ್ಸ್ ಆಗದೆ ನಡೆಯುವುದು ತುಂಬಾ ಒಳ್ಳೆಯದು. ಊಟ ಮಾಡಿದ ನಂತರ ವಾಕಿಂಗ್ ಹೇಗೆ ಮಾಡಬೇಕು? ಎಂಬ ಅನುಮಾನಗಳು ಕೂಡ ಇವೆ. ನಿಧಾನವಾಗಿ ನಡೆಯಬೇಕಾ? ವೇಗವಾಗಿ ನಡೆಯಬೇಕಾ ಎಂದು ಯೋಚಿಸುತ್ತಾ ಇರುತ್ತಾರೆ. ನಿಜವಾಗಿಯೂ ರಾತ್ರಿ ಊಟ ಮಾಡಿದ ನಂತರ ವಾಕಿಂಗ್ ಹೇಗೆ ಮಾಡಬೇಕು? ಹೇಗೆ ನಡೆದರೆ ನಮಗೆ ಲಾಭವಾಗುತ್ತದೆ..?

ತಕ್ಷಣವೇ ವಾಕ್‌ ಮಾಡಬಾರದು:
ವಾಕಿಂಗ್ ಮಾಡಬೇಕು ಎಂದರೆ ಬಹಳ ಮಂದಿ ರಾತ್ರಿ ಊಟ ಮಾಡಿದ ತಕ್ಷಣ ಮಾಡುತ್ತಾರೆ. ಹಾಗೆ ಮಾಡುವುದು ಜೀರ್ಣ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ. ಹೊಟ್ಟೆಯಲ್ಲಿ ನೋವು, ವಾಂತಿ ಬಂದಂತೆ ಆಗುತ್ತದೆ. ಆದ್ದರಿಂದ ಊಟ ಮಾಡಿದ ಕೆಲ ಹೊತ್ತಿನ ನಂತರ ವಾಕಿಂಗ್ ಮಾಡುವುದು. ಅಂದರೆ ಅರ್ಧ ಗಂಟೆಯ ನಂತರ ನಡೆಯುವುದು ಒಳ್ಳೆಯದು.

ಹೀಗೆ ನಡೆಯಿರಿ:
ರಾತ್ರಿ ವೇಳೆ ಊಟ ಮಾಡಿದ ನಂತರ ತುಂಬಾ ಜನ ವಾಕಿಂಗ್ ಮಾಡುವುದು ಒಳ್ಳೆಯದೇ ಎಂದು ಕೇಳುತ್ತಾರೆ. ಬಹಳ ಜನರು ವೇಗವಾಗಿ ನಡೆಯುತ್ತಾರೆ. ಆದ್ರೆ ಹಾಗೆ ಯಾವುದೇ ಕಾರಣಕ್ಕೂ ಮಾಡಬಾರದು.. ನಿಧಾನವಾಗಿ ನಡೆಯಬೇಕು. ವೇಗವಾಗಿ ನಡೆಯುವುದರಿಂದ ಹೊಟ್ಟೆಯಲ್ಲಿ ನೋವು ಬರಬಹುದು.

ಜೀರ್ಣಕ್ರಿಯೆಯ ಸುಧಾರಣೆ;
ರಾತ್ರಿ ವೇಳೆ ವಾಕಿಂಗ್ ಮಾಡುವುದರಿಂದ ಜೀರ್ಣ ಕ್ರಿಯೆ ಎಂಬುದು ಸುಧಾರಿಸುತ್ತದೆ. ಹೀಗೆ ರಾತ್ರಿ ವೇಳೆ ವಾಕಿಂಗ್ ಮಾಡಿದರೆ, ತಿನ್ನುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಗ್ಯಾಸ್, ಅಜೀರ್ಣ, ಮಲಬದ್ಧತೆ ಸಮಸ್ಯೆಗಳು ಉದ್ಭವಿಸುವುದಿಲ್ಲ.

ವೆಯಿಟ್ ಲಾಸ್ ಆಗುತ್ತಾರೆ:
ರಾತ್ರಿ ವೇಳೆ ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ಈಜಿಯಾಗಿ ವೆಯಿಟ್ ಲಾಸ್ ಆಗುತ್ತಾರೆ. ತಿನ್ನುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ ಬೆಳಿಗ್ಗೆ ಟಾಯ್ಲೆಟ್‌ ಫ್ರೀಯಾಗಿ ಆಗುತ್ತದೆ.

ಒತ್ತಡ ಕಡಿಮೆಯಾಗುತ್ತದೆ:
ರಾತ್ರಿ ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಮೆದುಳನ್ನು ಶಾಂತವಾಗಿ ಇರಿಸುತ್ತದೆ. ಒತ್ತಡ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ.

Share Post