ಈ ರಷ್ಯನ್ ಬ್ಯೂಟಿಗೆ ಭಾರತೀಯ ವರ ಬೇಕಂತೆ; ಪೋಸ್ಟರ್ ಹಿಡಿದು ನಿಂತ ಸುಂದರಿ!
ಮದುವೆ ಆಗಬೇಕಾದ ಯುವಕ-ಯುವತಿಯರು ಸಂಗಾತಿಗಾಗಿ ಮ್ಯಾಟ್ರಿಮೋನಿ ಸೈಟ್‌ಗಳು ಮೊರೆ ಹೋಗುವುದು ಕಾಮನ್.. ಮ್ಯಾಟ್ರಿಮೊನಿ ಕಂಪನಿಗಳ ಮೂಲಕ ಸಂಗಾತಿಗಳನ್ನು ಹುಡುಕುವುದು, ಬ್ರೋಕರ್ ಮೂಲಕ ವಿವರಗಳನ್ನು ನೀಡಿ ಸಂಗಾತಿಯನ್ನು ಹುಡುಕುತ್ತಾರೆ.. ಆದ್ರೆ ಇಲ್ಲೊಬ್ಬ ಸುಂದರಿ ಭಾರತದ ವರ ಬೇಕು ಅಂತ ಬೋರ್ಡ್ ಹಿಡಿದು ನಿಂತಿದ್ದಾಳೆ.. ರಷ್ಯಾದ ಸುಂದರಿಯೊಬ್ಬಳು ‘ಲುಕಿಂಗ್ ಫಾರ್ ಇಂಡಿಯನ್ ಹಸ್ಬೆಂಡ್’ ಎಂದು ಬರೆಯಲಾಗಿರುವ ಪೋಸ್ಟರ್ ಹಿಡಿದು ನಿಂತಿದ್ದು, ಅದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..
ಒಂದು ಪುರುಷ ಆಕೃತಿ ಪಕ್ಕದಲ್ಲಿ ನಿಂತು ಈ ಪೋಸ್ಟರ್ ಹಿಡಿದು ರಷ್ಯನ್ ಯುವತಿ ಫೋಟೋ ತೆಗೆಸಿಕೊಂಡಿದ್ದಾಳೆ.. ಅದನ್ನು ವ್ಯಕ್ತಿಯೊಬ್ಬ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ.. ಈ ರಷ್ಯಾ ಸುಂದರಿ ಹೆಸರು ದಿನಾರಾ ಎಂದು ಹೇಳಲಾಗಿದೆ.. ಈಕೆ ಭಾರತೀಯ ಮಾಲ್ ಒಂದರ ಬಳಿ ಕೆಂಪು ಸೀರೆ ತೊಟ್ಟು ನಿಂತಿದ್ದಳು.. ಭಾರತೀಯ ಮಾಲ್‌ಗೆ ಭಾರತೀಯರು ಬರುತ್ತಾರೆ.. ಅಲ್ಲಿ ಭಾರತೀಯ ವರ ಸಿಗಬಹುದು ಅನ್ನೋ ಕಾರಣಕ್ಕೆ ಈ ಪೋಸ್ಟರ್ ಹಿಡಿದಿದ್ದಳು ಎಂದು ತಿಳಿದುಬಂದಿದೆ..