InternationalLifestyle

ಇಲ್ಲಿ ಮಹಿಳೆಯರು ಕೆಂಪು ಲಿಪ್‌ಸ್ಟಿಕ್‌ ಹಚ್ಚಿದರೆ ಶಿಕ್ಷೆ ಗ್ಯಾರೆಂಟಿ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಸರ್ವಾಧಿಕಾರಿ ಧೋರಣೆಯಿಂದ ಅಲ್ಲಿನ ಜನತೆಗೆ ತೀವ್ರ ತೊಂದರೆ ನೀಡುತ್ತಿದ್ದಾನೆ.. ವಿಚಿತ್ರವಾದ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಅಲ್ಲಿನ ಜನರ ವೈಯಕ್ತಿಕ ಆದ್ಯತೆಗಳನ್ನು ಸಹ ಆತನೇ ನಿರ್ಧಾರ ಮಾಡುತ್ತಿದ್ದಾನೆ.. ಜನರು ಏನು ತಿನ್ನಬೇಕು ಮತ್ತು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ಕೂಡಾ ಈ ಕಿಮ್‌ ಎಂಬ ಸರ್ವಾಧಿಕಾರಿಯೇ ನಿರ್ಧಾರ ಮಾಡುತ್ತಾನೆ.. ಇವುಗಳನ್ನು ಯಾರಾದರೂ ಉಲ್ಲಂಘಿಸಿದರೆ, ಭಾರೀ ದಂಡ ಮತ್ತು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಇತ್ತೀಚೆಗೆ, ಮಹಿಳೆಯರು ತಮ್ಮ ತುಟಿಗಳಿಗೆ ಕೆಂಪು ಲಿಪ್‌ ಸ್ಟಿಕ್‌ ಹಚ್ಚುವುದನ್ನು ಉತ್ತರ ಕೊರಿಯಾದಲ್ಲಿ ನಿಷೇಧಿಸಲಾಗಿದೆ..  ಕಿಮ್ ಈ ಕೆಂಪು ಲಿಪ್‌ಸ್ಟಿಕ್‌ ಅನ್ನು ಬಂಡವಾಳಶಾಹಿಯ ಸಂಕೇತ ಎಂದು ಭಾವಿಸಿದ್ದಾರೆ.. ಹೀಗಾಗಿ ಕೆಂಪು ಲಿಪ್‌ಸ್ಟಿಕ್‌ ಗೆ ನಿಷೇಧ ಹೇರಲಾಗಿದೆ.. ಇನ್ನು ಮೇಕಪ್‌ ಮೇಲಿನ ನಿಷೇಧ ಕೂಡಾ ಹಾಗೆಯೇ ಮುಂದುವರೆದಿದೆ..

ಮಹಿಳೆಯರ ಮೇಕಪ್ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಇದಕ್ಕೆಲ್ಲ ಅವಕಾಶ ನೀಡಿದರೆ ಕ್ರಮೇಣ ಜನರು ಪಾಶ್ಚಾತ್ಯ ಸಿದ್ಧಾಂತದತ್ತ ಆಕರ್ಷಿತರಾಗುತ್ತಾರೆ ಎಂಬುದು ಕಿಮ್ ನ ಆತಂಕ.. ಕಿಮ್ ಸರ್ಕಾರ ಜನರನ್ನು ಸಾಧಾರಣ ಮತ್ತು ಸಹಜ ಎಂದು ಉತ್ತೇಜಿಸುತ್ತಿದೆ. ಹೀಗಾಗಿ ಲಿಪ್‌ಸ್ಟಿಕ್‌ ಹಚ್ಚುವುದು ಅವರ ದೇಶದ ನಿಯಮಗಳಿಗೆ ವಿರುದ್ಧವಾಗಿದೆ.
ಅಲ್ಲದೆ, ಉತ್ತರ ಕೊರಿಯಾದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಅನೇಕ ಫ್ಯಾಷನ್‌ಗಳನ್ನು ನಿಷೇಧಿಸಲಾಗಿದೆ. ಬಿಗಿಯಾದ ಬಟ್ಟೆ, ನೀಲಿ ಜೀನ್ಸ್, ಆಭರಣಗಳು ಮತ್ತು ಕೆಲವು ರೀತಿಯ ಹೇರ್‌ ಕಟ್‌ಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೂದಲು ಟ್ರಿಮ್ ಮಾಡಬೇಕು. ಮೇಲಾಗಿ ಕಿಮ್ ಡ್ರೆಸ್ಸಿಂಗ್ ಮತ್ತು ಹೇರ್ ಕಟ್  ಮಾಡಬಾರದು. ಆತನನ್ನು ಅನುಕರಿಸುವ ಯಾರಾದರೂ ಅಧಿಕಾರಿಗಳಿಂದ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಕೆಲವೊಮ್ಮೆ ಭಾರಿ ದಂಡ ತೆರಬೇಕಾಗುತ್ತದೆ. ಕರ್ಮಗಲಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು ರಸ್ತೆಯಲ್ಲಿ ಕಂಡರೆ ಅಷ್ಟೆ.

ಇನ್ನು ಕಿಮ್ ಅವರ ಲೈಂಗಿಕ ಬಯಕೆಗಳನ್ನು ಪೂರೈಸಲು ಸುಂದರ ಹುಡುಗಿಯರನ್ನು ಹೊಂದಿರುವ ‘ಪ್ಲೇಷರ್ ಸ್ಕ್ವಾಡ್’ ಎಂಬ ಗುಂಪು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಕಿಮ್ ಪ್ರತಿ ವರ್ಷ 25 ಸುಂದರ ಕನ್ಯೆಯರನ್ನು ಆಯ್ಕೆ ಮಾಡುತ್ತಾರೆ ಎಂದು ದೇಶದಿಂದ ಓಡಿಹೋದ ಮಹಿಳೆ ಯೆನ್ಮಿ ಪಾರ್ಕ್ ಬಹಿರಂಗಪಡಿಸಿದ್ದಾರೆ.            ಮಹಿಳೆಯರ ನೋಟ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಹೇಳಿದೆ.

Share Post