ಕಣ್ಣಿನ ಸುತ್ತ ಕಪ್ಪು ಕಲೆಯಾಗಿದೆಯಾ? ಇಲ್ಲಿದೆ ಕೆಲ ಟಿಪ್ಸ್ ಗಳು
ಬೆಂಗಳೂರು: ಪ್ರತಿಯೊಬ್ಬರಿಗೂ ಮುಖದ ಕಾಂತಿಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅಂತವರಿಗೆ ಸ್ವಲ್ಪ ಮುಖದ ಮೇಲೆ ಕಲೆಯಾದ್ರೂ ಕೂಡ ಮುಜುಗರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ ಈ ಕಣ್ಣಿನ ಸುತ್ತಲ ಕಪ್ಪು ಕಲೆ ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ದೆ ಮಾಡದೇ, ಕಣ್ಣಿಗೆ ಸರಿಯಾಗಿ ಆರೈಕೆ ಮಾಡದೇ ಇರುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆಯಾಗುತ್ತದೆ. ಅದರಲ್ಲೂ ಕಂಪ್ಯೂಟರ್ ಮುಂದೆ ಹೆಚ್ಚಾಗಿ ಕುಳಿತು ಕೆಲಸ ಮಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುತ್ತದೆ.ಮುಖದ ಸೌಂದರ್ಯವನ್ನೂ ಹೆಚ್ಚಿಸಲು ದುಬಾರಿ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇವು ಬಹಳ ದಿನಗಳವರೆಗೆ ಮುಖದ ಸೌಂದರ್ಯವನ್ನು ಕಾಯ್ದು ಕೊಳ್ಳುವುದಿಲ್ಲ. ಹೀಗಾಗಿ ಇದನ್ನು ತಡೆಯಲು ಕೆಲ ಮನೆಮದ್ದುಗಳಿವೆ.
ಕೊಬ್ಬರಿ ಎಣ್ಣೆ ಮತ್ತು ಅರಿಶಿನ ಪುಡಿ: ಅರ್ಧ ಚಮಚ ಕೊಬ್ಬರಿ ಎಣ್ಣೆ ಜೊತೆಗೆ ಚಿಟಕಿ ಅರಿಶಿಣ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಂತರ ಇದನ್ನು ಕಣ್ಣಿನ ಸುತ್ತ ಆಗಿರುವ ಕಪ್ಪು ಅಥವಾ ಸುಕ್ಕ ಕಲೆಗಳ ಮೇಲೆ ನಿಧಾನವಾಗಿ ಅನ್ವಯಿಸಿ. 15ನಿಮಿಷಗಳ ಕಾಲ ಇದನ್ನು ತ್ವಚೆಯೆ ಮೇಲೆ ಬಿಡಿ.ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ
ಚೆನ್ನಾಗಿ ನೀರು ಕುಡಿಯಿರಿ: ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.. ನಿರ್ಜಲೀಕರಣ ಕಡಿಮೆಯಾಗದಂತೆ ಎಚ್ಚರ ವಹಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ. ಹಲೋ ಪ್ರತಿ ನಿತ್ಯ ನಿಯಮಿತವಾಗಿ ನೀರು ಕುಡಿಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಹರಳೆಣ್ಣೆ ಮತ್ತು ತೆಂಗಿನ ಎಣ್ಣೆ ಮಿಶ್ರಣ ಹಚ್ಚಿ: ಈ ಎರಡು ಎಣ್ಣೆಯನ್ನು ಮಿಕ್ಸ್ ಮಾಡಿ, ಮಲಗುವ ಮುನ್ನ ಕಣ್ಣಿನ ಕೆಳಗಡೆ ಮಸಾಜ್ ಮಾಡಿ ಮಲಗಿ, ಬೆಳಗ್ಗೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು ಹಾಗೂ ಕಪ್ಪು ಕಲೆ ಇಲ್ಲದಾಗುವುದು.
ಸೌತೆಕಾಯಿ: ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗೆಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು