ಗೃಹಪ್ರವೇಶ ಸಮಾರಂಭದ ಊಟ ಸೇವಿಸಿ 20 ಮಂದಿ ಅಸ್ವಸ್ಥ; ಮಹಿಳೆ ಸಾವು!
ಮೈಸೂರು; ಗೃಹಪ್ರವೇಶ ಸಮಾರಂಭದಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಊಟ ಮಾಡಿದ ಹಲವರು ಅಸ್ವಸ್ಥಗೊಂಡಿದ್ದಾರೆ.. ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.. ಮೈಸೂರು ತಾಲ್ಲೂಕಿನ ಮಾರ್ಬಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ..
ಗ್ರಾಮದಲ್ಲಿ ಹಸೊದಾಗಿ ಮನೆಯೊಂದು ಕಟ್ಟಲಾಗಿದ್ದು, ನಿನ್ನೆ ಅದರ ಗೃಹ ಪ್ರವೇಶ ಏರ್ಪಡಿಸಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಮಾಡಲಾಗಿದ್ದು ಅಡುಗೆ ಸೇವಿಸಿದ ಮೇಲೆ ಬಹುತೇಕರಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ.. ಮಕ್ಕಳು, ಮಹಿಳೆಯರು ಸೇರಿ ಸುಮಾರು 20 ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ..
ಇನ್ನು ಇದೇ ಸಮಾರಂಭದಲ್ಲಿ ಆಹಾರ ಸೇವಿಸಿದ್ದ 65 ವರ್ಷದ ವೃದ್ಧೆ ಶಿವಮ್ಮ ಎಂಬುವವರು ತೀವ್ರ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ.. 20 ಕ್ಕೂ ಹೆಚ್ಚು ಮಂದಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..